ಚೆನ್ನೈ: ತಮಿಳುನಾಡಿನಲ್ಲಿ ಜನವರಿ 1ರಿಂದ ಫೆಬ್ರುವರಿ 8 ವರೆಗೆ ನಡೆಸಿರುವ ಸಮೀಕ್ಷೆ ಪ್ರಕಾರ, ಕೋವಿಡ್-19 ರೋಗಿಗಳ ಪೈಕಿ ಶೇ 97ರಷ್ಟು ಜನರಲ್ಲಿ ರೂಪಾಂತರ ತಳಿ ಓಮೈಕ್ರಾನ್‌ನ ಸೋಂಕು ಇರುವುದು ಕಂಡುಬಂದಿದೆ.
ಚೆನ್ನೈ: ತಮಿಳುನಾಡಿನಲ್ಲಿ ಜನವರಿ 1ರಿಂದ ಫೆಬ್ರುವರಿ 8 ವರೆಗೆ ನಡೆಸಿರುವ ಸಮೀಕ್ಷೆ ಪ್ರಕಾರ, ಕೋವಿಡ್-19 ರೋಗಿಗಳ ಪೈಕಿ ಶೇ 97ರಷ್ಟು ಜನರಲ್ಲಿ ರೂಪಾಂತರ ತಳಿ ಓಮೈಕ್ರಾನ್‌ನ ಸೋಂಕು ಇರುವುದು ಕಂಡುಬಂದಿದೆ.
ರಾಜ್ಯದಲ್ಲಿ ಓಮೈಕ್ರಾನ್ ತಳಿ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ.
ರಾಜ್ಯದಲ್ಲಿ ವರದಿಯಾದ ಪ್ರಕರಣಗಳ ಪೈಕಿ, ಕಳೆದ ಡಿಸೆಂಬರ್ 14ರ ವೇಳೆಗೆ ಓಮೈಕ್ರಾನ್ ತಳಿ ಸೋಂಕಿನ ಪ್ರಕರಣಗಳ ಪ್ರಮಾಣ ಶೇ 13 ಇತ್ತು. ಡಿಸೆಂಬರ್ 21ರ ಹೊತ್ತಿಗೆ ಈ ಪ್ರಮಾಣ ಶೇ 18ಕ್ಕೆ ಏರಿ, ನಾಲ್ಕು ದಿನಗಳ ನಂತರ ಭಾರಿ ಹೆಚ್ಚಳವಾಗಿ ಶೇ 63ಕ್ಕೆ ಏರಿಕೆಯಾಯಿತು. ಡಿಸೆಂಬರ್ 28ಕ್ಕೆ ಈ ಸೋಂಕಿನ ಪ್ರಕರಣಗಳ ಪ್ರಮಾಣ ಶೇ 51ಕ್ಕೆ ಇಳಿಕೆಯಾಯಿತು ಎಂದು ಇದೇ ಸಮೀಕ್ಷೆ ಹೇಳುತ್ತದೆ.