ನವದೆಹಲಿ: 'ರಾಮ ಸೇತುವೆ'ಯನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಎಂದು ಘೋಷಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿರುವ ಮನವಿಯನ್ನು ಮಾರ್ಚ್ 9ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಕೊಂಡಿದೆ.

ರಾಮಸೇತುವೆ ಕುರಿತ ಅರ್ಜಿಯು ಕಳೆದ ಹಲವು ತಿಂಗಳುಗಳಿಂದ ವಿಚಾರಣೆಗೆ ಬಂದಿಲ್ಲ. ಈ ಕಾರಣದಿಂದ ಅದನ್ನು ವಿಚಾರಣಾ ಪಟ್ಟಿಯಿಂದ ಅಳಿಸಬೇಡಿ ಎಂದು ಸ್ವಾಮಿ ಅವರು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠದ ಎದುರು ಮನವಿ ಮಾಡಿದ್ದರು.
'ನಾವು ಈ ಅರ್ಜಿಯನ್ನು ಮಾರ್ಚ್ 9ರಂದು ವಿಚಾರಣೆ ನಡೆಸುತ್ತೇವೆ' ಎಂದು ಪೀಠ ಹೇಳಿದೆ.
ಕಳೆದ ವರ್ಷ ಏಪ್ರಿಲ್ 8 ರಂದು ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಸ್ವಾಮಿ ಕೋರಿದ್ದರು. ಇದಕ್ಕೂ ಮುನ್ನ ಮೂರು ತಿಂಗಳ ನಂತರ ಅರ್ಜಿಯನ್ನು ಪರಿಗಣಿಸುವುದಾಗಿ 2020ರ ಜನವರಿ 23 ರಂದು ಸುಪ್ರೀಂ ಕೋರ್ಟ್ ಹೇಳಿತ್ತು.