ಮುಳ್ಳೇರಿಯ: ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ವಾರ್ತಾ ಕಚೇರಿ ವತಿಯಿಂದ ಜಿಲ್ಲಾ ಮಟ್ಟದ ಸಂಘಟನಾ ಸಮಿತಿಯ ಸಹಯೋಗದಲ್ಲಿ ಮಾ.9 ರಂದು ಬುಧವಾರ ಆಜಾದಿಕ ಅಮ್ಯತ ಮಹೋತ್ಸವ ಜಿಲ್ಲಾ ಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 5 ಗಂಟೆಗೆ ಕಾರಡಕದಲ್ಲಿ ಸಮಾರಂಭ ನಡೆಯಲಿದೆ.
ಕಾರಡ್ಕ ಸತ್ಯಾಗ್ರಹ ಸ್ಮೃತಿ ವಸ್ತುಸಂಗ್ರಹಾಲಯವನ್ನು ಅ.9ರಂದು ಸಂಜೆ 5ಕ್ಕೆ ಕಾರಡ್ಕ ಬ್ಲಾಕ್ ಪಂಚಾಯಿತಿ ಪ್ರಾಂಗಣದಲ್ಲಿ ರಾಜ್ಯ ಪುರಾತತ್ವ ಸಚಿವ ಅಹ್ಮದ್ ದೇವರ ಕೋವಿಲ್ ಉದ್ಘಾಟಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎನ್.ಎ.ನೆಲ್ಲಿಕುನ್ನು ವಹಿಸುವರು. ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕರಾದ ಸಿ.ಎಚ್.ಕುಂಞಂಬು, ಇ.ಚಂದ್ರಶೇಖರನ್, ಎ.ಕೆ.ಎಂ.ಅಶ್ರಫ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಶೇಷ ಆಹ್ವಾನಿತರಾಗಿ ಸ್ವಾತಂತ್ರ್ಯ ಹೋರಾಟಗಾರ ಕ್ಯಾಪ್ಟನ್ ಕೆಎಂಕೆ ನಂಬಿಯಾರ್ ಉಪಸ್ಥಿತರಿರುವರು. ಖ್ಯಾತ ಸಾಹಿತಿ ಕರಿವೆಳ್ಳೂರು ಮುರಳಿ ಸಾಂಸ್ಕøತಿಕ ಉಪನ್ಯಾಸ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಯುವ ಕೂಟ, ಸ್ವಯಂ ಸೇವಾ ಸಂಸ್ಥೆಗಳು, ಕುಟುಂಬಶ್ರೀ ಹಾಗೂ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾರ್ಯಕರ್ತರ ವರ್ಣರಂಜಿತ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ.
ಕಾರಡ್ಕ ಅರಣ್ಯ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಪ್ರವೀಣ್ ಕಾರಡ್ಕ ನಿರ್ದೇಶನದ ಸಂಗೀತ ರಸಮಂಜರಿ ಪ್ರದರ್ಶನಗೊಳ್ಳಲಿದೆ. ಸತೀಶ್ ಗೋಪಿ ಬರೆದಿರುವ ಹಾಡಿಗೆ ಜಯ ಕಾರ್ತಿ ಸಂಗೀತ ನೀಡಿದ್ದಾರೆ. ಇದು ಸಾಂಸ್ಕೃತಿಕ ಉಪನ್ಯಾಸಗಳು, ವಜ್ರ ಮಹೋತ್ಸವ ಫೆಲೋಶಿಪ್ ಪಡೆದ ಕಲಾವಿದರಿಂದ ಸಂಗೀತ ಕಚೇರಿಗಳು ಮತ್ತು ಛಾಯಾಚಿತ್ರ ಪ್ರದರ್ಶನವನ್ನು ಒಳಗೊಂಡಿರುತ್ತದೆ. ಭಾನುವಾರ ಸಂಜೆ 6ಕ್ಕೆ ಕಾರಡ್ಕ ನಾರಾಂತಟ್ಟ ಪತ್ತಾಯಪುರ ಬಳಿ ಚಿತ್ರಕಲಾ ಸಮಾವೇಶ ಹಾಗೂ ಸಮುದಾಯ ಚಿತ್ರಕಲೆ ನಡೆಯಲಿದೆ. ಪಿ.ಎಸ್.ಕುಣಿಂಚಿತ್ತಾಯ, ಸಿ.ಕುಂಜಂಬು ನಾಯರ್, ಚಂದ್ರನ್ ಮೊಟ್ಟಮ್ಮಾಳ್, ಕೆ.ಪಿ.ಜ್ಯೋತಿ ಚಂದ್ರನ್, ಸಚೀಂದ್ರನ್ ಕಾರಡ್ಕ ಸಹಿತ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಮಾಹಿತಿ ನೀಡಿರುವರು.