ತಿರುವನಂತಪುರ: ಪ್ರತಿತಿಂಗಳ ಒಂದನೇ ತಾರೀಖಿನಂದೂ ಮದ್ಯದಂಗಡಿ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ ರಾಜ್ಯದ ಮದ್ಯ ನೀತಿಯಲ್ಲಿ ಭಾರಿ ಬದಲಾವಣೆ ತರಲು ಸರ್ಕಾರ ಮುಂದಾಗಿದೆ. ಮಾರ್ಚ್ 25 ರಂದು ಹೊಸ ಮದ್ಯ ನೀತಿ ಘೋಷಣೆಯಾಗುವ ಸಾಧ್ಯತೆ ಇದೆ.
ಒಂದನೇ ತಾರೀಖು ಬಾರ್ ಗಳಿಗೆ ರಜೆ ಇದ್ದರೂ, ಬಾರ್ ಗಳ ಕಿಟಕಿಗಳ ಮೂಲಕ ಕಾಳಸಂತೆಯಲ್ಲಿ ಮದ್ಯ ಸುಲಭವಾಗಿ ದೊರೆಯುತ್ತದೆ. ಒಂದನೇ ತಾರೀಖಿನಂದು ನಿಷೇಧಾಜ್ಞೆ ಹಿಂಪಡೆಯಬೇಕು ಎಂದು ಬೆಪ್ಕೋ ಹಾಗೂ ಬಾರ್ ಮಾಲೀಕರು ಈ ಹಿಂದೆ ಒತ್ತಾಯಿಸಿದ್ದರು.
ಪ್ರವಾಸೋದ್ಯಮ ವಲಯದಲ್ಲಿ ಹೆಚ್ಚಿನ ಬಾರ್‍ಗಳಿಗೆ ಅವಕಾಶ ನೀಡಬೇಕು ಎಂದು ಪ್ರವಾಸೋದ್ಯಮ ಇಲಾಖೆ ಈ ಹಿಂದೆ ಒತ್ತಾಯಿಸಿತ್ತು. ಧಾರ್ಮಿಕ ಸ್ಥಳಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ಮದ್ಯಂದಂಗಡಿಗಳ ದೂರವನ್ನು ಕಡಿಮೆ ಮಾಡುವ ಶಿಫಾರಸನ್ನು ಸರ್ಕಾರ ಪರಿಗಣಿಸುತ್ತಿದೆ.