ಮೊಸರಿನ ಚಟ್ನಿ ಅನೇಕ ರೀತಿಯಲ್ಲಿ ಮಾಡುತ್ತಾರೆ, ನೀವು ಈ ರೀತಿಯ ಚಟ್ನಿ ಟ್ರೈ ಮಾಡಿಲ್ಲ ಅಂದರೆ ಇಲ್ಲಿದೆ ನೋಡಿ ರೆಸಿಪಿ. ಬಿಸಿ-ಬಿಸಿ ಅನ್ನದ ಜೊತೆ ಸವಿಯಲು ಈ ಚಟ್ನಿ ತುಂಬಾನೇ ಸೂಪರ್ ಆಗಿರುತ್ತೆ, ಇದನ್ನು ಮಾಡಲು 10 ನಿಮಿಷ ಸಾಕು.
ಈ ಚಟ್ನಿ ಮಾಡುವುದು ಹೇಗೆ ಎಂದು ನೋಡೋಣ:
ಮೊಸರು ಚಟ್ನಿ ರೆಸಿಪಿ
ಬೇಕಾಗುವ ಸಾಮಗ್ರಿ 1 ಕಪ್ ಗಟ್ಟಿ ಮೊಸರು 1 ಚಮಚ ಖಾರದ ಪುಡಿ 2 ಚಮಚ ಕೊತ್ತಂಬರಿ ಪುಡಿ 1 ಚಮಚ ಗರಂ ಮಸಾಲ ಪುಡಿ 1 ಈರುಳ್ಳಿ 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ರುಚಿಗೆ ತಕ್ಕ ಉಪ್ಪು 1 ಲೋಟ ನೀರು ಒಗ್ಗರಣೆಗೆ 2 ಚಮಚ ಎಣ್ಣೆ 1/2 ಚಮಚ ಸಾಸಿವೆ 1/4 ಚಮಚ ಜೀರಿಗೆ
ಮಾಡುವ ವಿಧಾನ * ಒಂದು ಬೌಲ್‌ಗೆ ಮೊಸರು ಹಾಕಿ ಅದಕ್ಕೆ ಖಾರದ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕದಡಿ ಇಡಿ. * ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಜೀರಿಗೆ ಹಾಕಿ, ಅದು ಚಟ್ ಪಟ್ ಅಂತ ಹೇಳುವಾಗ ಈರುಳ್ಳಿ ಹಾಕಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. * ಈಗ ಮೊಸರು ಹಾಕಿ ಒಮ್ಮೆ ಮಿಕ್ಸ್ ಮಾಡಿ ಉರಿ ತುಂಬಾ ಕಡಿಮೆ ಮಾಡಿ. 3-5 ನಿಮಿಷ ಕುದಿಸಿದರೆ ಮೊಸರಿನ ಚಟ್ನಿ ರೆಡಿ.
INSTRUCTIONS ಸಲಹೆ: ನಿಮ್ಮ ಖಾರಕ್ಕೆ ತಕ್ಕಂತೆ ಮಣಸಿನ ಪುಡಿ ಹಾಕಿ ಸ್ವಲ್ಪ ಕಾಶ್ಮೀರಿ ಮೆಣಸಿನ ಪುಡಿ ಸೇರಿಸಿದರೆ ಕಲರ್ ಸೂಪರ್ ಆಗಿರುತ್ತೆ.