ಮಂಜೇಶ್ವರ: 'ಆಜಾದಿ ಕಾ ಅಮೃತ್‍ಮಹೋತ್ಸವ್'ಅಂಗವಾಗಿ ಲೇಬರ್ ವೆಲ್ಫೇರ್ ಆರ್ಗನೈಸೇಶನ್, ಬೀಡಿ ವರ್ಕಸ್ ವೆಲ್ಫೇರ್ ಫ0ಡ್ ಹಾಗೂ ಮಲಬಾರ್ ಕ್ಯಾನ್ಸರ್ ಸೆಂಟರ್ ಜಂಟಿಯಾಗಿ ಬೀಡಿ ಕಾರ್ಮಿಕರಿಗಾಗಿ ಅರ್ಬುದ ರೋಗದ ಬಗ್ಗೆ ಜಾಗೃತಿ ಮತ್ತು ತಪಾಸಣಾ ಶಿಬಿರ ಜರುಗಿತು.
ಹೊಸಂಗಡಿ ಕೆಎಸ್‍ಟಿಎ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಕೇರಳ-ಲಕ್ಷದ್ವೀಪ್ ವೆಲ್ಫೇರ್ ಆಂಡ್ ಸೆಸ್ ಕಮಿಶನರ್ ಡಾ. ಜೆ. ಯುಜಿನ್ ಗೋಮಸ್ ಉದ್ಘಾಟಿಸಿದರು. ವೈದ್ಯಾಧಿಕಾರಿ ಡಾ. ಕೆ.ಎಸ್ ಉಣ್ಣಿಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಬೀಡಿ ಕಾರ್ಮಿಕರಲ್ಲಿ ಹೆಚ್ಚುತ್ತಿರುವ ಅರ್ಬುದ ರೋಗದ ಹಿನ್ನೆಲೆಯಲ್ಲಿ ಜಾಗೃತಿ ಶೀಬಿರ ಆಯೋಜಿಸಲಾಗಿತ್ತು. ಮಲಬಾರ್ ಕ್ಯಾನ್ಸರ್ ಸೆಂಟರ್‍ನ ಓಂಕೋಲಜಿ ವಿಭಾಗ ಮುಖ್ಯಸ್ಥ ಡಾ.ಎ.ಪಿ ನೀತು, ಉಪನ್ಯಾಸಕ ಡಾ. ಫಿನ್ಸ್, ಎಂ. ಫಿಲಿಪ್ ತರಗತಿ ನಡೆಸಿದರು. ಕಣ್ಣೂರು ಬಿ.ಡಬ್ಲ್ಯೂ.ಡಬ್ಲ್ಯೂ.ಎಫ್ ಡಿಸ್ಪೆನ್ಸರಿ ಮುಖ್ಯಸ್ಥ ಡಾ. ಪಿ.ವಿ ಹುಸೈನ್, ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ಬೋರ್ಡ್ ಸದಸ್ಯೆ ಬೇಬಿ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಕೆ. ಅಕ್ಷತಾ ಸ್ವಾಗತಿಸಿದರು. ಪಿ.ವಿ ಶ್ರೀಜಿತ್ ವಂದಿಸಿದರು.