ಎರಡು ವರ್ಷಗಳಿಂದ ಮಾಸ್ಕ್ ಎಂಬುವವುದು ತುಂಬಾ ಅವಶ್ಯಕವಾದ ವಸ್ತುಗಳಲ್ಲಿ ಒಂದಾಗಿದೆ. ನಾನಾ ಬಗೆಯ ಮಾಸ್ಕ್ ಬಳಸುತ್ತಾರೆ. ಆದರೆ ಇತ್ತೀಚೆಗೆ ಮೂಗು ಮಾತ್ರ ಮುಚ್ಚುವಂತೆ ಬಳಸುವ ಮಾಸ್ಕ್ ಸಾಮಾಜಿಕ ತಾಣದಲ್ಲಿ ಸಾಕಷ್ಟು ಟ್ರೆಂಡ್ ಆಗುತ್ತಿದೆ.
ಬರೀ ಮೂಗು ಮಾತ್ರ ಮುಚ್ಚುವಂತಿರುವ ಮಾಸ್ಕ್ ಅನ್ನು 'ಕೋಸ್ಕ್ ಮಾಸ್ಕ್' ಎಂದು ಕರೆಯಲಾಗುತ್ತಿದೆ. ಈ ಮಾಸ್ಕ್‌ನ ವಿಶೇಷತೆಯೆಂದರೆ ಇದನ್ನು ಆಹಾರ ಸೇವಿಸುವಾಗ ಬಳಸಬಹುದಾಗಿದೆ. ಈ ಮಾಸ್ಕ್ ಧರಿಸಿದರೆ ಮೂಗು ಮಾತ್ರ ಮುಚ್ಚಿರುತ್ತದೆ, ಬಾಯಿಯ ಭಾಗವನ್ನು ಮುಚ್ಚಿರದ ಕಾರಣ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವಿಸುವಾಗ ಬಳಸಬಹುದಾಗಿದೆ.
ಈ ವಿಚಿತ್ರ ಡಿಸೈನ್ ಮಾಸ್ಕ್ ಅನ್ನು ಅಟ್ಮಾನ್ ಎಂಬ ಸೌತ್ ಕೊರಿಯನ್ ಕಂಪನಿ ತಯಾರಿಸಿದೆ. ಈ ಮಾಸ್ಕ್‌ಗೆ ಕೋಸ್ಕ್ ಎಂಬ ಹೆಸರು ಕೊರಿಯನ್ ಭಾಷೆಯಿಂದ ಬಂದಿದೆ. ಕೋ ಎಂದರೆ ಕೊರಿಯನ್ ಭಾಷೆಯಲ್ಲಿ ಮೂಗು, ಹಾಗಾಗಿ ಇದಕ್ಕೆ ಕೋಸ್ಕ್ ಎಂದು ಕರೆಯಲಾಗಿದೆ ಎಂದು ವಾಶಿಂಗ್‌ಟನ್‌ಪೋಸ್ಟ್ ಹೇಳಿದೆ.
ಈ ಮಾಸ್ಕ್ ಆನ್‌ಲೈನ್‌ನಲ್ಲಿ ಲಭ್ಯವಿದೆ. ಇದಕ್ಕೆ KF80 ಮಾಸ್ಕ್ ಎಂಬ ಟ್ಯಾಗ್‌ನಲ್ಲಿದೆ. ಈ ಮಾಸ್ಕ್ 0.3 ಮೈಕ್ರೋನ್ಸ್ ರೋಗಾಣುಗಳನ್ನು ತಡೆಗಟ್ಟುವ ಸಾಮಾರ್ಥ್ಯ ಹೊಂದಿದೆಯಂತೆ.
ಈ ಮಾಸ್ಕ್‌ಗೆ ಸಾಮಾಜಿಕ ತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ಕೆಲವರಿಗೆ ಈ ಮಾಸ್ಕ್ ತಮಾಷೆಯಾಗಿ ಕಂಡರೆ ಇನ್ನು ಕೆಲವರು ಇಷ್ಟಪಡುತ್ತಿದ್ದಾರೆ. ಹೋಟೆಲ್‌ಗಳಿಗೆ ಹೋದಾಗ ನಾವೆಲ್ಲಾ ಮಾಸ್ಕ್ ತೆಗೆದು ತಿನ್ನುತ್ತೇವೆ, ಆಗ ಕೊರೊನಾವೈರಸ್ ಹರಡುವ ಆತಂಕ ಇದ್ದೇ ಇರುತ್ತದೆ, ಇಂಥ ಮಾಸ್ಕ್ ಧರಿಸಿದರೆ ಒಳ್ಳೆಯದೇ ಅಲ್ವಾ? ತಿನ್ನುವಾಗ ಸ್ವಲ್ಪ ಹೊತ್ತು ಮಾಸ್ಕ್ ತೆಗೆದು ಕೂರಬಹುದು ಎಂದು ಅಂದುಕೊಳ್ಳುವವರಿಗೆ ಮಾತ್ರ ಈ ಮಾಸ್ಕ್ ಖಂಡಿತ ಹಿಡಿಸಲ್ಲ...