HEALTH TIPS

ಯಾರೇ ಬಂದರೂ ಮುತ್ತಪ್ಪನ್ ಗೆ ಜಾತಿ ತಾರತಮ್ಯ ವಿಲ್ಲ: ವ್ಯೆರಲ್ ಆದ ಹೀಗೊಂದು ವೀಡಿಯೋ

 
      ಕಾಸರಗೋಡು: ಮುತ್ತಪ್ಪನ್ ಕೆಲವರಿಗೆ ದೇವರು ಮತ್ತು ಕೆಲವರಿಗೆ ವಿಭಿನ್ನ ಅನುಭವ.  ಏನೇ ಆಗಲಿ ಮುತ್ತಪ್ಪನಿಗೆ ನಮಸ್ಕರಿಸದೆ ಉತ್ತರ ಕೇರಳದ ಪ್ರಾರ್ಥನೆ ಪೂರ್ಣವಾಗುವುದಿಲ್ಲ.  ಇದೊಂದು ಉದಾಹರಣೆ.
       ಮುತ್ತಪ್ಪನ್ ದ್ಯೆವ ಮುಸ್ಲಿಂ ಮಹಿಳೆಯ ಮುಂದೆ ಜಾತಿ-ಧರ್ಮ ಭೇದವಿಲ್ಲ, ನೋವು, ಸಂಕಟಗಳು ಬದಲಾಗುತ್ತವೆ, ಜೀವನದಲ್ಲಿ ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳಿ ಸಾಂತ್ವನ ಹೇಳಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ  ವೈರಲ್ ಆಗಿದೆ.  ರಮ್ಲತ್ ಎಂಬ ಮಹಿಳೆ ಮುತ್ತಪ್ಪನ ಆಶೀರ್ವಾದ ಪಡೆದಿರುವ ವೀಡಿಯೊ ಒಂದು ಕ್ಷಣ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ.
        ಕಾಸರಗೋಡು  ಚೆರುವತ್ತೂರು ಕಡಲ ತೀರದಲ್ಲಿರುವ ಬಾಲಕೃಷ್ಣನ್ ಅವರ ಮನೆಯಲ್ಲಿ ದ್ಯೆವಕೋಲ ನಡೆಯುತ್ತಿತ್ತು.  ಇದನ್ನು ನೋಡಲು ಬಂದ ಮುಸ್ಲಿಂ ಮಹಿಳೆಯನ್ನು ಮುತ್ತಪ್ಪನ್ ಕರೆದು ಸಮಾಧಾನ ಪಡಿಸಿದರು.  ಕೇರಳದ ಹೃದಯವನ್ನು ಮುಟ್ಟಿದ ಈ ಮುತ್ತಪ್ಪನ್ ತೆಯ್ಯಂ ನ್ನು ಕಣ್ಣೂರು ಕರಿವೆಲ್ಲೂರ್ ವೆಲ್ಲಾಚಲ್‌ನ ಸನಿಲ್ ಪೆರುವಣ್ಣನ್ ಇಲ್ಲಿ ನಿರ್ವಹಿಸಿದ್ದರು.


         ‘ವಾಟ್ಸ್ ಆಪ್ ಗ್ರೂಪ್ ನಲ್ಲಿ ವಿಡಿಯೋ ಭಾರೀ ಶೇರ್ ಆಗಿದೆ.  ಫೇಸ್ ಬುಕ್ ನಲ್ಲೂ ವೈರಲ್ ಆಗಿದೆ.  ಮುತ್ತಪ್ಪನ್ ಸನಿಹ ಶ್ರದ್ದೆ,ಭಕ್ತಿಗಳಿಂದ ಯಾರು ಬಂದರೂ ಜಾತಿ, ಧರ್ಮ ಕೇಳಲಾಗುವುದಿಲ್ಲ.  ಅನೇಕ ಜನರು ತಮ್ಮ ದುಃಖವನ್ನು ವ್ಯಕ್ತಪಡಿಸಲು ಬರುತ್ತಾರೆ.  ಆದರೆ ಇಂತಹ ಅನುಭವ ಆಗಿರುವುದು ಇದೇ ಮೊದಲು.  ಸಾಕಷ್ಟು ಜನ ಭಾಗಹಿಸಿದ್ದರು.  ಸಂತೋಷದಿಂದ ಜನರು ವಿದಾಯ ಹೇಳಿದರು.  ಅನೇಕ ದ್ಯೆವಗಳಿದ್ದರೂ, ಜನರು ಮುತ್ತಪ್ಪನ್ ದ್ಯೆವವನ್ನು ಕಾಸರಗೋಡು ಚಂದ್ರಗಿರಿ ನದಿಯಾಚೆ ವಿಶೇಷ ಶ್ರದ್ದೆಯಿಂದ ಪೂಜಿಸುತ್ತಾರೆ.  ಇದು ಉತ್ತರ ಮಲಬಾರಿನ ಜನರಿಗೆ ಅತ್ಯಂತ ಹತ್ತಿರವಾದ ತೆಯ್ಯಂ.  ಇಲ್ಲಿ  ಮಹಿಳೆ ಆಕಸ್ಮಿಕವಾಗಿ ಅಲ್ಲಿಗೆ ಬಂದವರು.  
     ಮುತ್ತಪ್ಪನನ್ನು ಧಾರ್ಮಿಕ ನೆಲೆಯಲ್ಲಿ ನೋಡುವ ಅಗತ್ಯವಿಲ್ಲ ಎಂದು  ತೆಯ್ಯಂ ಕಲಾವಿದ ಸುನಿಲ್ ಹೇಳುತ್ತಾರೆ. ಬದಲಿಗೆ ನಮ್ಮ ಸ್ನೇಹಿತನಂತೆ ಭಾವಿಸಿದರೆ ಸಂಕಷ್ಟಗಳು ನಿವಾರಣೆಯಾಗಬಲ್ಲದು ಎಂದು ಅವರು ಹೇಳುತ್ತಾರೆ.  ತಂದೆಯ ಹಾದಿಯಲ್ಲೇ ಸುನೀಲ್ ತೆಯ್ಯಂ ಕಲಾವಿದರಾದರು.  ಅವರು ಕಲಾ ಶಿಕ್ಷಕರಾಗಿ ಕೆಲಸ ಮಾಡಿದರು ಆದರೆ ನಂತರ ಸಾಂಪ್ರದಾಯಿಕ ವೃತ್ತಿಯಾದ ತೆಯ್ಯಂ ಗೆ ತೊಡಗಿಸಿಕೊಂಡರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries