HEALTH TIPS

ಕೊಡುಗೈದಾನಿ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರಿಗೆ ಸೀತಾಂಗೋಳಿಯಲ್ಲಿ ನುಡಿನಮನ

       ಕುಂಬಳೆ: ಕೊಡುಗೈದಾನಿ, ಸಮಾಜಸೇವಕ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ಅವರಿಗೆ ನುಡಿನಮನ ಕಾರ್ಐಖ್ರಮ ಸೀತಾಂಗೋಳಿ ಪೇಟೆಯಲ್ಲಿ ಜರುಗಿತು. ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಸಈತಾಂಗೋಳಿ ಘಟಕ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

          ಯಾವತ್ತೂ ಸಭೆಗಳನ್ನು ಮತ್ತು ವೇದಿಕೆಯನ್ನು ನಿರಾಕರಿಸಿದ ಆ ಮಹಾನ್ ವ್ಯಕ್ತಿಯು 2010 ಏಪ್ರಿಲ್ ನಲ್ಲಿ, ರಾಜೇಶ್ವರ ರಾವ್ ಅವರ ಹೆಸರಿನಲ್ಲಿ ಬಿ.ವಿ. ರಾಜನ್ ಅವರ ನೇತೃತ್ವದಲ್ಲಿ ರೂಪೀಕರಿಸಲಾದ ಪ್ರಥಮ ಪ್ರಶಸ್ತಿಯನ್ನು ಸ್ವೀಕರಿಸಲು ಸೀತಾಂಗೋಳಿಗೆ ಆಗಮಿಸಿದುದನ್ನು ಈ ಸಂದರ್ಭ ನೆನಪಿಸಲಾಯಿತು. ದೇವಳಗಳು, ದೇವರ ಮೂರ್ತಿಗೆ ಚಿನ್ನಾಭರಣ ಮಾಡಿ ಅದರ ರಕ್ಷಣೆಗೆ ಚಿನ್ನಕ್ಕಿಂತ ಹೆಚ್ಚು ಖರ್ಚು ಮಾಡುವುದಕ್ಕಿಂತ ಬಡವರಿಗೆ ಮನೆ ಮತ್ತು ಬೇಕಾದ ಸಹಾಯ ಮಾಡುವ ಮೂಲಕ ದೇವರ ಆಶೀರ್ವಾದ ಮತ್ತು ಅನುಗ್ರಹ ಪಡೆಯಬಹುದೆಂದು ಬಹಿರಂಗವಾಗಿ ಘೋಷಿಸಿದ್ದನ್ನು ನೆನಪಿಸಿಕೊಂಡರು. 



         ಬೇಡಿದವರಿಗೆ ಸೈಕಲಿಂದ ಆರಂಭವಾಗಿ, ಹಾರೆ-ಗುದ್ದಲಿ,  ಆಟೊ, ಮುನ್ನೂರಕ್ಕಿಂತ ಹೆಚ್ಚು ಮನೆಗಳು, ಚಿಕಿತ್ಸಾಲಯಕ್ಕೆ ಬರುವ ರೋಗಿಗಳಿಗೆ ಬೇಕಾಗಿ ಒಂದೂವರೆ ಕಿಲೋಮೀಟರಿನ ರಸ್ತೆಗೆ ದಾಂಬರು ಮೊದಲಾದ ದಾನಗಳನ್ನು ನೆನಪಿಸಿಕೊಳ್ಳಲಾಯಿತು. 

          ಘಟಕದ ಉಪಾಧ್ಯಕ್ಷ ಮಹಮ್ಮದ್‍ಮುಸ್ತಫಾ ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಗ್ರಾಪಂ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ, ನ್ಯಾಯವಾದಿ ಥಾಮಸ್ ಡಿ.ಸೋಜ, ಅಬ್ದುಲ್ಲ ಮುಗು, ಜಯಂತ ಪಾಟಾಳಿ, ಸಂತೋಷ್ ಮುಂಡಿತ್ತಡ್ಕ, ಸುಲೈಮಾನ್ ಊಜಂಪದವು, ಕೃಷ್ಣ ಆಳ್ವ, ಸ್ವಾಗತ್ ಸೀತಾಂಗೋಳಿ, ಮೋಹನನ್, ಸಂಜೀವ ರೈ, ಎಸ್.ಪಿ ಇಸ್ಮಾಯಿಲ್, ಮಾನ ಮಾಸ್ಟರ್, ಸಇದ್ದೀಕ್, ಎಸ್.ಪಿ ಹನೀಫಾ ಮುಂತಾದವರು ಉಪಸ್ಥಿಇತರಿದ್ದರು. ಘಟಕ ಪ್ರಧಾನ ಕಾರ್ಯದರ್ಶಿ ಸುಕುಮಾರ್ ಕುದ್ರೆಪ್ಪಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries