ಬದಿಯಡ್ಕ: ನೆಹರು ಯುವ ಕೇಂದ್ರ ಕಾಸರಗೋಡು ಹಾಗೂ ಯವ ಕೇಸರಿ ಕಿಳಿಂಗಾರು ಇದರ ಸಂಯುಕ್ತಾಶ್ರಯದಲ್ಲಿ ಜಲ ಸಂರಕ್ಷಣೆ ಯ ಕುರಿತು ಸಂದೇಶ ನಾಟಕ ನಾರಾಯಣ.ಪಿ ಪೆರಡಾಲ ಅವರ ನಿರ್ದೇಶನದಲ್ಲಿ ಮಾರ್ಪನಡ್ಕ, ಹಾಗೂ ಸೀತಂಗೋಳಿಯಲ್ಲಿ ಜರಗಿತು. ಕಾಸರಗೋಡು ಸÀರ್ಕಾರಿ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಹಾಗೂ ಸುರಕ್ಷಾ ಪೆÇ್ರಜೆಕ್ಟಿನ ಅಧಿಕಾರಿಗಳು ಪಾತ್ರಕ್ಕೆ ಜೀವ ತುಂಬಿದರು.
ಮಾರ್ಪನಡ್ಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈತ್ರಿ ಲೈಬ್ರರಿ ಹಾಗೂ ವಾಚನಾಲಯಮಾರ್ಪನಡ್ಕ ಇದರ ಸದಸ್ಯರು ನಾಟಕ ತಂಡವನ್ನು ಸ್ವಾಗತಿಸಿದರು. ನೆಹರು ಯುವ ಕೇಂದ್ರ ಜಿಲ್ಲಾ ಸಂಯೋಜಕ ಅಖಿಲ್ ಪಿ ಉದ್ಘಾಟಿಸಿದರು. ಶೆರೀಫ್ ಪಾಲಕ್ಕಾರ್, ಸುರಕ್ಷಾ ಪ್ರಜೆಕ್ಟ್ ಕೌನ್ಸಿಲರ್ ಪೂಜಾ, ಮಹಾಬಲ ನಾಯಕ್, ಸವಾದ್ ಪಿ ಯಂ ಮಾತನಾಡಿದರು.
ಸೀತಾಂಗೋಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತೋಷ್ ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್ ಸೀತಾಂಗೋಳಿ ಇದರ ಸದಸ್ಯರು ತಂಡವನ್ನು ಸ್ವಾಗತಿಸಿದರು. ಸಮಾರೋಪ ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ನೆರವೇರಿಸಿ ಮಾತನಾಡಿದರು. ಮಾಜಿ ಪಂಚಾಯತಿ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿಸೋಜ ಮುಖ್ಯ ಅತಿಥಿ ಯಾಗಿ ಭಾಗವಹಿಸಿದರು. ಯುವಕೇಸರಿ ಕಿಳಿಂಗಾರ್ ಇದರ ಸದಸ್ಯ ಜಯರಾಜ್ .ಎ ಉಪಸ್ಥಿತರಿದ್ದರು.
ಎನ್ ಎಸ್ ಎಸ್ ಕಾರ್ಯಕರ್ತ ವೈಷಾಖ್ ಆರಿಕ್ಕಾಡಿ ಸ್ವಾಗತಿಸಿ ಯನ್ ವೈ ಕೆ ಯುವ ಸ್ವಯಂಸೇವಕ ರೇಣುಕಾ ವಂದಿಸಿದರು.