ಎಣ್ಮಕಜೆ ಗ್ರಾ.ಪಂ ಹಾಗೂ ಮಂಜೇಶ್ವರ ಬ್ಲಾ.ಪಂ. ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು, ಪೆರ್ಲದ ಹಿರಿಯ ವ್ಯಾಪಾರಿಯೂ ಹೌದು. ರಾ.ಸ್ವ.ಸಂ.ದ ಸಕ್ರಿಯ ಸ್ವಯಂಸೇವಕರಾಗಿದ್ದ ಟಿ.ಅರ್.ಕೆ.ಭಟ್ ತುರ್ತುಪರಿಸ್ಥಿತಿ ಸಂದರ್ಭ ಜ್ಯೆಲುವಾಸ ಅನುಭವಿಸಿದ್ದರು. ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದು, ಎಲ್ಲಾ ಪಕ್ಷದವರೊಂದಿಗೆ ನಿಕಟ ಸಂಬಂಧಗಳೊಂದಿಗೆ ಜನಾನುರಾಗಿಯಾಗಿದ್ದರು.
ಪ್ರಧಾನಿ ನರೇಂದ್ರಮೋದಿ ಎರಡನೇ ಅವಧಿ ಪ್ರಧಾನಿಯಾಗಿ ಅಧಿಕಾರವೇರಿದ ಸಂದರ್ಭ ಪಕ್ಷದ ಹಿರಿಯ ಕಾರ್ಯಕರ್ತರೊಂದಿಗೆ ನಡೆಸಿದ್ದ ಪೋನ್ ಸಂಭಾಷಣೆಯ ಭಾಗವಾಗಿ ಮೋದಿಯವರು ಭಟ್ಟರಿಗೆ ಕರೆಮಾಡಿ ಆರೋಗ್ಯ ಯೋಗಕ್ಷೇಮ ವಿಚಾರಿಸಿದ್ದರು.ಭಟ್ಡರ ನಿಧನದಿಂದ ಜಿಲ್ಲೆಯ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಮೃತರು ಪತ್ನಿ,ಇಬ್ಬರು ಪುತ್ರರು,ಏಳು ಮಂದಿ ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.