ಕಾಸರಗೋಡು: ಪೆರಿಯದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಹತ್ಯೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಲಾಗಿದೆ.
ಕುಟುಂಬ ಸದಸ್ಯರು ಈ ಬಗ್ಗೆ ಮರು ತನಿಖೆಗೆನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರ ಪೋಷಕರು ಮರು ತನಿಖೆ ಕೋರಿ ನ್ಯಾಯಾಲಯದ ಡ ಹೋಗಲಿದ್ದಾರೆ. ಅಪರಾಧ ಮತ್ತು ಪಿತೂರಿಯಲ್ಲಿ ಭಾಗಿಯಾಗಿರುವ ಎಲ್ಲರಿಗೂ ತನಿಖೆಯನ್ನು ವಿಸ್ತರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಸದ್ಯ ಪೆರಿಯ ಜೋಡಿ ಕೊಲೆ ಪ್ರಕರಣದ ಸಿಬಿಐ ತನಿಖೆ ಪ್ರಗತಿಯಲ್ಲಿದೆ. ಇದುವರೆಗೆ ಸಿಬಿಐ 24 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆದರೆ, ಬಹುತೇಕ ಆರೋಪಿಗಳು ಷಡ್ಯಂತ್ರ ಹಾಗೂ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಇಬ್ಬರ ಕುಟುಂಬಸ್ಥರು ಹೇಳಿದ್ದಾರೆ. ಹೀಗಾಗಿ ಅವರನ್ನು ಕಾನೂನಿನ ಮುಂದೆ ತರಲು ಮರು ತನಿಖೆ ಅಗತ್ಯ ಎನ್ನುತ್ತಾರೆ ಪೋಷಕರು. ಜತೆಗೆ ಆಯುಧಗಳು ಪತ್ತೆಯಾದ ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.