HEALTH TIPS

ಶಿವಶಂಕರನಿಗೆ ಎಲ್ಲವೂ ಗೊತ್ತು; ಸತ್ಯವನ್ನು ನಿರೀಕ್ಷಿಸಲಾಗಿತ್ತು: ಒಬ್ಬ ಮಹಿಳೆ ಅನುಭವಿಸಬೇಕಾದುದಕ್ಕಿಂತ ಹೆಚ್ಚಿನದನ್ನು ಅನುಭವಿಸಿದ್ದೇನೆ: ಸ್ವಪ್ನಾ ಸುರೇಶ್

                  ತಿರುವನಂತಪುರ: ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ವಿರುದ್ಧÀ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಮಾತನಾಡಿದ್ದಾರೆ. ಅಕ್ರಮ ವಹಿವಾಟಿನ ಬಗ್ಗೆ ಶಿವಶಂಕರ್ ಅವರಿಗೆ ತಿಳಿದಿತ್ತು ಎಂದು ಸ್ವಪ್ನಾ ಸುರೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶಿವಶಂಕರ್ ತನ್ನ ಜೀವನದ ಪ್ರಮುಖ ಭಾಗವಾಗಿದ್ದರು.ಹಲವಾರು ನಿರ್ಧಾರಗಳನ್ನು ಶಿವಶಂಕರನ್ ಅವರ  ಸೂಚನೆಯ ಮೇರೆಗೆ ತೆಗೆದುಕೊಳ್ಳಲಾಗಿದೆ. ತನ್ನ ವ್ಯಕ್ತಿತ್ವವನ್ನು ಪ್ರಶ್ನಿಸುವ ರೀತಿಯಲ್ಲಿ ಆತ್ಮಕಥನ ಬರೆದರೆ ಒಳಿತಾಗದು ಎಂದು ಸ್ವಪ್ನಾ ತಿಳಿಸಿರುವರು.

                          ಶಿವಶಂಕರ್ ಅವರಿಗೆ ಐಪೋನ್ ನೀಡಿ ವಂಚಿಸಲಾಗಿದೆ  ಎಂಬ ಆರೋಪ ಸುಳ್ಳು ಎಂದು ಸ್ವಪ್ನಾ ಹೇಳಿದ್ದಾರೆ. ಯುಎಇ ಕಾನ್ಸುಲೇಟ್ ನಲ್ಲಿ ಅಕ್ರಮ ವಹಿವಾಟು ನಡೆಸುತ್ತಿರುವ ಬಗ್ಗೆ ಶಿವಶಂಕರ್ ಅವರಿಗೆ ತಿಳಿದಿದೆ. ಹಾಗಾಗಿ ಉದ್ಯೋಗ ಬದಲಿಸುವಂತೆ ಸಲಹೆ ನೀಡಿದ್ದರು. ಶಿವಶಂಕರ್ ಅವರು ಬಾಹ್ಯಾಕಾಶ ಸಂಶೋಧನಾ ಕೇಂದ್ರದಲ್ಲಿ ಕೆಲಸ ಪಡೆಯಲು ಶಿಫಾರಸು ಮಾಡಿದ್ದರು. ನನ್ನ ಸಾಮಥ್ರ್ಯದಿಂದಾಗಿ ನನಗೆ ಕೆಲಸ ನೀಡಲಾಗಿದೆ.

                    ತಾನು ಮೋಸ ಮಾಡಿದ್ದೇನೆ ಎಂದು ಶಿವಶಂಕರ್ ಹೇಳುವರೆಂದು ಭಾವಿಸಿರಲಿಲ್ಲ ಎಂದ ಸಪ್ನಾ, ಯಾರೂ ಕೂಡ ತನ್ನ ತಿತ್ವವನು ಪ್ರಶ್ನಿಸಿ ಕ್ಲೀನ್ ಚಿಟ್ ಪಡೆಯಬಹುದೆಂದು ಭಾವಿಸಬಾರದೆಂದು ಹೇಳಿದರು. ಅವರು ಎಸಗಿದ ತಪಪಿಗೆ ಶಿಕ್ಷೆ ಅನುಭವಿಸಿದರು ಎಂದು ಸಪ್ನಾ ಪ್ರತಿಕ್ರಿಯಿಸಿದ್ದಾರೆ.

                    ಐಎಎಸ್ ಅಧಿಕಾರಿಯೊಬ್ಬರು ಆತ್ಮಚರಿತ್ರೆ ಬರೆಯುತ್ತಿದ್ದೇನೆ ಎಂದು ಹೇಳಿದಾಗ ಗುಣಮಟ್ಟವನ್ನು ನಿರೀಕ್ಷಿಸಬಹುದು. ಆದರೆ ಶಿವಶಂಕರ್ ಐಫೆÇೀನ್ ಬಗ್ಗೆ ಬರೆಯುತ್ತಾರೆ. ಇದರಿಂದ ಏನನ್ನು ಮನವರಿಕೆ ಮಾಡಬೇಕೆಂದು ಸ್ವಪ್ನಾ ಕೇಳಿರುವಳು. 

                  ಪುಸ್ತಕ ಪ್ರಕಟವಾದಾಗ ಅವರ ಸಮಗ್ರತೆಯನ್ನು ಪ್ರಶ್ನಿಸುವಂಥದ್ದೇನಾದರೂ ಇದ್ದರೆ ಪ್ರತಿಕ್ರಿಯಿಸುವುದಾಗಿ ಸ್ವಪ್ನಾ ಹೇಳಿದರು. ಶಿವಶಂಕರ್ ಅವರಿಂದ ಯೋಗ್ಯ ನಡವಳಿಕೆಯನ್ನು ನಿರೀಕ್ಷಿಸಲಾಗಿತ್ತು. ಐಎಎಸ್ ಅಧಿಕಾರಿಗೆ ಐಫೆÇೀನ್ ಕೊಡುವಷ್ಟು ಸಾಮಥ್ರ್ಯ ತನಗಿನ್ನೂ ಬಂದಿಲ್ಲ. ಶಿವಶಂಕರ್ ಅವರ ಪುಸ್ತಕದಲ್ಲಿ ಸುಳ್ಳುಗಳಷ್ಟೇ ಹೇಳಲ್ಪಟ್ಟಂತಿದ್ದು, ಹಾಗೆ ಬರೆಯಬಾರದಿತ್ತು ಎಂದು ಸ್ವಪ್ನಾ ಹೇಳಿದ್ದಾರೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries