ಬದಿಯಡ್ಕ: ವಿಷ್ಣುಗುಪ್ತ ವಿಶ್ವ ವಿದ್ಯಾ ಪೀಠ ಅಶೋಕೆ , ಗೋಕರ್ಣ ಇದರ ಪ್ರಚಾರ ಮತ್ತು ಸಂಪನ್ಮೂಲ ಸಂಗ್ರಹಕ್ಕಾಗಿ ವಿಶಿಷ್ಟವಾದ ಆಹಾರ ಮೇಳವು ವಿ.ವಿ.ವಿ ಸಮಿತಿ ಮುಳ್ಳೇರಿಯ ಹವ್ಯಕ ಮಂಡಲ ಮತ್ತು ಮಹಿಳೋದಯ ಬದಿಯಡ್ಕ ಇದರ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ ನಲ್ಲಿ ಬದಿಯಡ್ಕ.ಶ್ರೀ ಭಾರತೀ ವಿದ್ಯಾ ಪೀಠದಲ್ಲಿ ಜರಗಲಿದ್ದು ಈ ಬಗ್ಗೆ ಪೂರ್ವಭಾವೀ ಸಿದ್ಧತಾ ಸಭೆ ವಿದ್ಯಾ ಪೀಠದಲ್ಲಿ ಜರಗಿತು.
ಮುಳ್ಳೇರಿಯ ಹವ್ಯಕ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಮಹಾ ಮಂಡಲ ಕಾಮದುಘಾ ಟ್ರಸ್ಟ್ ಅಧ್ಯಕ್ಷ ಡಾ ವೈ ವಿ ಕೃಷ್ಣ ಮೂರ್ತಿ ಸಮಾರಂಭಗಳ ಸಮಗ್ರ ರೂಪದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರೂಪಿಸಲಾಯಿತು ಮತ್ತು ಸಭೆಯಲ್ಲಿ ಸಮಾಲೋಚಿಸಿ ಕಾರ್ಯಕ್ರಮದ ವಿವಿಧ ಸಿದ್ಧತೆಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಮಹಾ ಮಂಡಲ ಮಾತೃತ್ವಮ್ ಸಂಚಾಲಕಿ ಈಶ್ವರಿ ಬೇರ್ಕಡವು, ಮಂಡಲ, ವಲಯಗಳ ಪದಾಧಿಕಾರಿಗಳು, ಮಹಿಳೋದಯ ಕಾರ್ಯಕರ್ತೆಯರು, ಭಾರತೀ ವಿದ್ಯಾಪೀಠದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು ವಂದಿಸಿದರು.