ಕಾಸರಗೋಡು: ಮಧೂರು ಗ್ರಾಮ ಪಂಚಾಯಿತಿ ವತಿಯಿಂದ ಕಾಂಕ್ರೀಟ್ ಕೆಲಸ ಪೂರ್ತಿಗೊಳಿಸಲಾದ ಮನ್ನಿಪ್ಪಾಡಿ-ಶ್ರೀಗೋಪಾಲಕೃಷ್ಣ ದೇವಸ್ಥಾನ ರಸ್ತೆಯ ಉದ್ಘಾಟನೆಯನ್ನು ಗ್ರಾಪಂ ಅಧ್ಯಕ್ಷ ಕೆ. ಗೋಪಾಲಕೃಷ್ಣ ನೆರವೇರಿಸಿದರು. ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷ ಉಮೇಶ್ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಉಪಾಧ್ಯಕ್ಷೆ ಸಮಿಜಾ ವಿನೋದ್, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಸೂರ್ಲು, ಯಶೋಧಾ ಎಸ್. ನಾಯ್ಕ್, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಟೀಚರ್, ಸ್ಮಿತಾಸುಧಾಕರನ್, ಉಷಾಸುರೇಶ್, ಸೌಮ್ಯಾದಿನೇಶ್, ಟಿ.ಕೆ ಜನನಿ, ಗ್ರಾ.ಪಂ ಮಾಜಿ ಸದಸ್ಯರಾದ ಹರ್ಷಿತಾಆನಂದ್, ಗಿರಿಜಾ ಗಟ್ಟಿ, ಸ್ಥಳೀಯರಾದ ಉದಯಕುಮಾರ್ ಮನ್ನಿಪ್ಪಾಡಿ, ಚಂದ್ರಶೇಖರ ಗಟ್ಟಿ, ಎನ್. ಸತೀಶ್, ಮೋಹನ್ ರೈ, ಗಂಗಾಧರ, ಅರವಿಂದ, ಲೋಕೇಶ್ ಮನ್ನಿಪ್ಪಾಡಿ, ರಾಜಗೋಪಾಲ್, ವಾಸುದೇವ ಹೊಳ್ಳ ಉಪಸ್ಥಿತರಿದ್ದರು.