ಕಾಸರಗೋಡು: ಕನ್ನಡದ ಹಿರಿಯ ವಿದ್ವಾಂಸ, ಭಾಷಾಂತರಕಾರ ಎ. ನರಸಿಂಹ ಭಟ್ ಹಾಗೂ ಹಿರಿಯ ಕವಿ, ನಾಡೋಜ ಚೆನ್ನವೀರ ಕಣವಿ ಅವರಿಗೆ ಶ್ರದ್ಧಾಂಜಲಿ ಸಮಾರಂಭ ಫೆ. 20ರಂದು ಮಧ್ಯಾಹ್ನ 3ಕ್ಕೆ ಕನ್ನಡ ಸಾಹಿತ್ಯ ಪರಿಷತ್ ಕಾಸರಗೋಡು ಕೇಂದ್ರ ಕಚೇರಿಯಲ್ಲಿ ನಡೆಯಲಿರುವುದಾಗಿ ಕಸಾಪ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.