ಪೆರ್ಲ: ಪೆರ್ಲ ಅಂಚೆಕಚೇರಿಯ ಶೇಣಿ ಶಾಖೆಯಲ್ಲಿ ಸುದೀರ್ಘ 28 ವರ್ಷಗಳ ಸೇವೆ ನಂತರ ನಿವೃತ್ತರಾದ ಪೋಸ್ಟ್ ಮಾಸ್ಟರ್ ಸುಬ್ರಾಯ ನಾಯಕ್ ಶೇಣಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಪೆರ್ಲ ಅಂಚೆಕಚೇರಿಯಲ್ಲಿ ಜರುಗಿತು. ಪೆರ್ಲ ಅಂಚೆ ಕಚೇರಿಯ ಅಂಚೆಪಾಲಕ ಗೋವಿಂದ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಉಪ ಅಂಚೆ ಪಾಲಕ ಮುರಳೀಧರ್ ಸ್.ಎನ್, ಸಿಬ್ಬಂದಿ ಚಿತ್ರಿಕಾ, ಜಗದೀಶ್ ಪಡ್ರೆ, ಕಮಲ, ಶಂಕರ, ಅನಂತ, ರಾಜಾರಾಮ್‍ಮಾಣಿಕ್ಯ ಕೀರ್ತನ್, ಶಶಿಕಲಾ ಶೇಣಿ ಉಪಸ್ಥಿತರಿದ್ದರು. ಪದ್ಮನಾಭ ಸರ್ಪಂಗಳ ಸ್ವಾಗತಿಸಿದರು. ದಾಮೋದರ ಬಜಕೂಡ್ಲು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.