ಕಾಸರಗೋಡು: ದೀರ್ಘ ಕಾಲದಿಂದ ಮುಚ್ಚುಗಡೆಗೊಂಡಿದ್ದ ಶಿಕ್ಷಣ ಸಂಸ್ಥೆಗಳು ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಕಾಸರಗೋಡು ಚಿನ್ಮಯ ವಿದ್ಯಾಲಯದ ಎಲ್.ಕೆ.ಜಿಯಿಂದ ತೊಡಗಿ ಒಂಬತ್ತನೇ ತರಗತಿ ವೆಗಿನ ವಿದ್ಯಾರ್ಥಿಗಳನ್ನು ಶಾಲಾ ವತಿಯಿಂದ ತರಗತಿಗೆ ಸ್ವಾಗತಿಸಲಾಯಿತು. ಕೋವಿಡ್ ಮಾನದಂಡದೊಂದಿಗೆ, ಕೇರಳ ಸಾಂಪ್ರದಾಯಿಕ ಬ್ಯಾಂಡ್ ಮೇಳ, ಶುಭಕಾರಿ ಬೊಂಬೆಗಳು, ಹುಲಿ, ಕರಡಿ ಸೇರಿದಂತೆ ನಾನಾ ಪ್ರಾಣಿಗಳ ವೇಷಗಳೊಂದಿಗೆ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು. ಹಾಡು, ನೃತ್ಯಗಳ ಮೂಲಕ ಹಿರಿಯ ವಿದ್ಯಾರ್ಥಿಗಳು ಎಳೆಯರನ್ನು ರಂಜಿಸಿದರು. ಚಿನ್ಮಯ ವಿದ್ಯಾಲಯದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ, ನಿರ್ದೇಶಕ ಬಿ. ಪುಷ್ಪರಾಜ್, ಮುಖ್ಯ ಶಿಕ್ಷಕಿಯರಾದ ಪೂರ್ಣಿಮಾ, ಸಿಂಧೂಶಶೀಂದ್ರನ್ ಉಪಸ್ಥಿತರಿದ್ದರು.