ಕಾಸರಗೋಡು: ಬೇಕಲ್ ರೆಸಾಟ್ರ್ಸ್ ಡೆವಲಪ್‍ಮೆಂಟ್ ಕಾಪೆರ್Çರೇಷನ್ (ಬಿಆರ್‍ಡಿಸಿ) ಅಧಿಕಾರಿಗಳು ಮತ್ತು ನಗರಸಭೆಯ ಅಧಿಕಾರಿಗಳು ನೀಲೇಶ್ವರ ನಗರಸಭಾ ವ್ಯಾಪ್ತಿಯ ಅಳಿತ್ತಲ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಪ್ರದೇಶಕ್ಕೆ ಭೇಟಿ ನೀಡಿದರು. ಭೂಪರಿವರ್ತನೆ ಪ್ರಕ್ರಿಯೆ ಮುಗಿದ ಬಳಿಕ ಯೋಜನೆ ಕಾರ್ಯಾರಂಭ ಮಾಡಲಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನ ಭಾಗವಾಗಿ ಯೋಜನೆಗೆ `25 ಕೋಟಿಯ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ. ಮೊದಲ ಹಂತದಲ್ಲಿ 5 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಲು ಬಿಆರ್ ಡಿಸಿ ಮುಂದಾಗಿದೆ. ಪ್ರವಾಸೋದ್ಯಮ ಯೋಜನೆ ಸಾಕಾರಗೊಂಡರೆ ಉತ್ತರ ಮಲಬಾರ್ ನ ಪ್ರಮುಖ ಪ್ರವಾಸಿ ತಾಣವಾಗಿ ಅಳಿತ್ತಲ ಯೋಜನೆ ರೂಪುಗೊಳ್ಳಲಿದೆ.ಬಿಆರ್ ಡಿಸಿ ವ್ಯವಸ್ಥಾಪಕ ನಿರ್ದೇಶಕ ಶಿಜಿನ್ ಪರಂಬತ್, ವ್ಯವಸ್ಥಾಪಕ ಕೆ.ಎಂ.ರವೀಂದ್ರನ್, ಸಹಾಯಕ. ವ್ಯವಸ್ಥಾಪಕ ಪಿ.ಸುನೀಲಕುಮಾರ್, ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ, ಉಪಾಧ್ಯಕ್ಷ ಪಿ.ಮುಹಮ್ಮದ್ ರಫಿ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಿ.ಗೌರಿ, ನಗರಸಭಾ ಸದಸ್ಯರಾದ ಪಿ.ಕೆ.ಲತಾ, ರಾಜೇಂದ್ರನ್ ಪಿ.ಕೆ ಉಪಸ್ಥಿತರಿದ್ದರು.