ತಿರುವನಂತಪುರ: ಕಳೆದ ಎರಡು ದಿನಗಳಿಂದ ಸುದ್ದಿಯಾಗಿದ್ದ ಸ್ವಯಂಸೇವಾ ಸಂಸ್ಥೆ ಎಚ್.ಆರ್.ಡಿ.ಎಸ್ ವಿರುದ್ಧ ಪ್ರಕರಣ ದಾಖಲಾಗಿದೆ. ರಾಜ್ಯ ಎಸ್‍ಸಿ-ಎಸ್‍ಟಿ ಆಯೋಗ ಪ್ರಕರಣ ದಾಖಲಿಸಿದೆ. ಅಟ್ಟಪ್ಪಾಡಿಯಲ್ಲಿ ಆದಿವಾಸಿ ಕುಟುಂಬಗಳಿಗೆ ವಾಸಕ್ಕೆ ಯೋಗ್ಯವಲ್ಲದ ಮನೆಯನ್ನು ನಿರ್ಮಿಸಲಾಗಿದೆ ಎಂಬ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಆದಿವಾಸಿಗಳ ಭೂಮಿಯನ್ನು ಗುತ್ತಿಗೆ ಪಡೆದಿರುವ ಆರೋಪದ ಬಗ್ಗೆಯೂ ಆಯೋಗ ಪರಿಶೀಲನೆ ನಡೆಸಲಿದೆ.
ಎಚ್.ಆರ್.ಡಿ.ಎಸ್. ಕುರಿತು ಬಂದಿರುವ ದೂರುಗಳ ಕುರಿತು ವರದಿಯನ್ನು ಜಿಲ್ಲಾಧಿಕಾರಿ ಮತ್ತು ಎಸ್‍ಪಿಗೆ ಸಲ್ಲಿಸುವಂತೆಯೂ ಆಯೋಗ ಸೂಚಿಸಿದೆ. ಹೈ ರೇಂಜ್ ರೂರಲ್ ಡೆವಲಪ್‍ಮೆಂಟ್ ಸೊಸೈಟಿ ಅಥವಾ ಎಚ್‍ಆರ್‍ಡಿಎಸ್ ಸ್ವಪ್ನಾ ಸುರೇಶ್ ಹೊಸತಾಗಿ ನೇಮಕಗೊಳಿಸಿದ ಎನ್‍ಜಿಒ ಆಗಿದೆ. ಮಹಿಳಾ ಸಬಲೀಕರಣ ಮತ್ತು ಅSಖ ಕಾರ್ಯಯೋಜನೆಗಳನ್ನು ಸಿ.ಎಸ್.ಆರ್ ಗೆ ನಿಯೋಜಿಸಲಾಗಿದೆ. ಎಚ್.ಆರ್.ಡಿ.ಎಸ್.ಹೊಸದೆಹಲಿ ಮೂಲದ ಸ್ವಯಂಸೇವಾ ಸಂಸ್ಥೆಯಾಗಿದೆ.