ಕಾಸರಗೋಡು: ಪನತ್ತಡಿ ಗ್ರಾಮ ಪಂಚಾಯಿತಿ ಮತ್ತು ಪಾಣತ್ತೂರು ಕುಟುಂಬ ಆರೋಗ್ಯ ಕೇಂದ್ರ ವತಿಯಿಂದ ಪಾಲಿಯೇಟಿವ್ ಕೇರ್ ತರಬೇತಿ ಮತ್ತು ಸಮಾವೇಶ ಪಾಣತ್ತೂರು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಪನತ್ತಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಸನ್ನಾ ಪ್ರಸಾದ್ ಸಮಾರಂಭ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುರ್ಯಾಕೋಸ್ ಅಧ್ಯಕ್ಷತೆ ವಹಿಸಿದ್ದರು. ಕಾಟೂರ್ ಬಾಲಚಂದ್ರನ್ ನಾಯರ್, ವಕೀಲ ರಾಧಾಕೃಷ್ಣ ಗೌಡ, ಲತಾ ಅರವಿಂದನ್, ಅರುಣ್ ರಂಗತ್ತುಮಲ ಉಪಸ್ಥಿತರಿದ್ದರು. ಸುಪ್ರಿಯಾ ಶಿವದಾಸ್ ಸ್ವಾಗತಿಸಿದರು. ವಿನಯಕುಮಾರ್ ವಂದಿಸಿದರು.