ಕಾಸರಗೋಡು: ಕೋವಿಡ್ ಹಿನ್ನೆಲೆಯಲ್ಲಿ ತಾತ್ಕಾಲಿಕವಗಿ ರದ್ದುಗೊಳಿಸಲಾಗಿದ್ದ ಮಂಗಳೂರು-ಕೋಯಿಕ್ಕೋಡ್ ನಡುವೆ ಸಂಚರಿಸುವ ನಾಲ್ಕು ರೈಲುಗಳ ಸಂಚಾರ ಫೆ.11ರಿಂದ ಪುನರಾರಂಭಗೊಳ್ಳಲಿದೆ. ಈ ಬಗ್ಗೆ ರೈಲ್ವೆ ಇಲಾಖೆ ಪ್ರಕಟಣೆ ನೀಡಿದೆ.
ಮಂಗಳೂರು-ಕೋಯಿಕ್ಕೋಡ್ ಎಕ್ಸ್‍ಪ್ರೆಸ್(16610), ಕೋಯಿಕ್ಕೋಡ್-ಕಣ್ಣೂರು ಅನ್ ರಿಸವ್ರ್ಡ್ ಎಕ್ಸ್‍ಪ್ರೆಸ್(06481), ಕಣ್ಣೂರು-ಚೆರ್ವತ್ತೂರ್ ಅನ್ ರಿಸವ್ರ್ಡ್ ಎಕ್ಸ್‍ಪ್ರೆಸ್(06469), ಚೆರ್ವತ್ತೂರ್-ಮಂಗಳೂರು(06491) ರೈಲುಗಳು ಸಂಚಾರ ಆರಂಭಿಸಲಿದೆ. ಇದರಲ್ಲಿ ಮಂಗಳೂರು-ಕೋಯಿಕ್ಕೋಡ್(16610) ರೈಲು ರಿಸವ್ರ್ಡ್ ಎಕ್ಸ್‍ಪ್ರೆಸ್ ಆಗಿ ಹಾಗೂ ಉಳಿದವುಗಳು ಅನ್ ರಿಸವ್ರ್ಡ್ ಎಕ್ಸ್‍ಪ್ರೆಸ್ ರೈಲುಗಳಾಗಿ ಸಂಚಾರ ಆರಂಭಿಸಲಿದೆ.