ನವದೆಹಲಿ:ಸಂಘಟಿತ ವಲಯದಲ್ಲಿ 15 ಸಾವಿರ ರೂಪಾಯಿಗಿಂತ ಹೆಚ್ಚು ಮೂಲ ವೇತನ ಇರುವ ಕಾರ್ವಿುಕರಿಗೆ ಹೊಸ ಪಿಂಚಣಿ ಯೋಜನೆಯನ್ನು ರೂಪಿಸಲು ಕಾರ್ವಿುಕ ಭವಿಷ್ಯ ನಿಧಿ ಕಚೇರಿ (ಇಪಿಎಫ್ಒ) ಚಿಂತಿಸಿದೆ. ಕಾರ್ವಿುಕರು ನಿವೃತ್ತಿಯ ನಂತರ ಹೆಚ್ಚು ಪಿಂಚಣಿಯನ್ನು ಬಯಸುತ್ತಾರೆ. ಹೀಗಾಗಿ ಹೊಸ ಪಿಂಚಣಿ ಯೋಜನೆಯನ್ನು ರೂಪಿಸಲು ಇಪಿಎಫ್ ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ. 1995ರ ಕಾರ್ವಿುಕರ ಪಿಂಚಣಿ ಯೋಜನೆಗೆ ಕಡ್ಡಾಯವಾಗಿ ಒಳಪಡದವ ರನ್ನು ಉದ್ದೇಶವಾಗಿ ಇರಿಸಿಕೊಂಡಿರುವ ಹೊಸ ಪಿಂಚಣಿ ಯೋಜನೆ ಬಗ್ಗೆ ಮಾರ್ಚ್ 11 ಮತ್ತು 12ರಂದು ಗುವಾಹಟಿಯಲ್ಲಿ ನಡೆಯುವ ಎಪಿಎಫ್ಒ ಟ್ರಸ್ಟಿಗಳ ಕೇಂದ್ರೀಯ ಮಂಡಳಿಯ (ಸಿಬಿಟಿ) ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಪಿಂಚಣಿ ಕುರಿತಂತೆ 2021ರ ನವೆಂಬರ್ನಲ್ಲಿ ಸಿಬಿಟಿ ರಚಿಸಿರುವ ಉಪಸಮಿತಿಯ ವರದಿ ಕೂಡ ಮಂಡನೆ ಆಗಲಿದೆ ಎಂದು ಮೂಲಗಳು ಹೇಳಿವೆ. ಕಾರ್ವಿುಕರು ಉದ್ಯೋಗಕ್ಕೆ ಸೇರುವ ವೇಳೆಗೆ ಮೂಲ ವೇತನ ಮತ್ತು ತುಟ್ಟಿಭತ್ಯೆಯು ಮಾಹೆಯಾನ 15 ಸಾವಿರ ರೂಪಾಯಿಗಿಂತ ಹೆಚ್ಚಿದ್ದರೆ ಅಂತಹವರು 1995ರ ಯೋಜನೆಯಲ್ಲಿ ಕಡ್ಡಾಯವಾಗಿ ಒಳಪಡುತ್ತಾರೆ. ಈ ವರ್ಗದ ಕಾರ್ವಿುಕರು ಶೇ. 8.33 ದರದಲ್ಲಿ ಕಡಿಮೆ ವಂತಿಗೆಯನ್ನು ಪಿಂಚಣಿ ನಿಧಿಗೆ ಪಾವತಿಸುತ್ತಿರುವ ಕಾರಣ ನಿವೃತ್ತಿಯ ನಂತರ ಕಡಿಮೆ ಪಿಂಚಣಿ ಪಡೆಯುತ್ತಾರೆ. ಇದಕ್ಕೆ 2014ರಲ್ಲಿ ತಿದ್ದುಪಡಿ ತಂದಿರುವ ಇಪಿಎಫ್ಒ, ಪಿಂಚಣಿ ಪಡೆಯುವುದಕ್ಕೆ 15 ಸಾವಿರ ರೂಪಾಯಿ ಮೂಲವೇತನ ಇರಬೇಕು ಎಂಬ ಮಿತಿಯನ್ನು ಹಾಕಿದೆ. ಇದು ಉದ್ಯೋಗಕ್ಕೆ ಸೇರುವ ವೇಳೆಗೆ 15 ಸಾವಿರ ರೂಪಾಯಿ ಮೂಲ ವೇತನ ಇರಬೇಕು ಎಂಬುದಕ್ಕೆ ಮಾತ್ರ ಅನ್ವಯ ಆಗುತ್ತಿತ್ತು. ಆದರೆ, ಇದನ್ನು ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಮತ್ತೆ ಪರಿಷ್ಕರಿಸಿದ ಇಪಿಎಫ್ಒ ಅದೇ ವರ್ಷ ಸೆ.1ರಿಂದ 6,500 ರೂಪಾಯಿಯ ಮೇಲ್ಮುಖ ವೇತನ ಎಂದು ಪರಿಗಣಿಸಿತು. ಈ ಪರಿಷ್ಕರಣೆಯಿಂದ ಪಿಂಚಣಿ ಯೋಜನೆಗೆ ಒಳಪಡುವ ಕಾರ್ವಿುಕರ ಸಂಖ್ಯೆ 50 ಲಕ್ಷದಷ್ಟಿದೆ ಎಂದು ಅಂದಾಜು ಮಾಡಲಾಗಿದೆ.