ನವದೆಹಲಿ: ರಷ್ಯಾ-ಯೂಕ್ರೇನ್ ಯುದ್ಧದಿಂದಾಗಿ ವಿಮಾನ ಸಂಚಾರ ಸ್ಥಗಿತಗೊಂಡಿದ್ದು, ಭಾರತದ ಹಲವರು ಯೂಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಮತ್ತೊಂದೆಡೆ ಯೂಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯರಿಗೆ ಒಂದಷ್ಟು ಸಲಹೆಗಳನ್ನು ನೀಡಿದೆ. ಯೂಕ್ರೇನ್ನಲ್ಲಿರುವ ಭಾರತೀಯ ಪ್ರಜೆಗಳು ತಮ್ಮ ಸುತ್ತಮುತ್ತಲ ವಾತಾವರಣದ ಕುರಿತು ಎಚ್ಚರಿಕೆಯಿಂದಿರಿ ಎಂಬ ಕಿವಿಮಾತಿನೊಂದಿಗೆ ಒಂದಷ್ಟು ಮಾರ್ಗದರ್ಶನವನ್ನೂ ಮಾಡಿದೆ.
ಎಲ್ಲರೂ ಎಚ್ಚರಿಕೆಯಿಂದಿರಿ, ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ, ಯಾವುದಕ್ಕೂ ನಿಮ್ಮೊಂದಿಗೆ ಎಲ್ಲ ದಾಖಲೆಗಳನ್ನು ಇಟ್ಟುಕೊಂಡಿರಿ. ಇನ್ನು ಕೆಲವು ಪ್ರದೇಶಗಳಲ್ಲಿ ಬಾಂಬ್ ದಾಳಿ ಎಚ್ಚರಿಕೆ ಸಂದೇಶಗಳೂ ಇವೆ. ಹೀಗಾಗಿ ಗೂಗಲ್ ಮ್ಯಾಪ್ ನೆರವಿನಿಂದ ಹತ್ತಿರದ ಬಾಂಬ್ ಶೆಲ್ಟರ್ಗಳ ಬಗ್ಗೆ ತಿಳಿದುಕೊಂಡಿರಿ ಎಂದೂ ಅದು ಸಲಹೆಯನ್ನು ರವಾನಿಸಿದೆ. ಗೂಗಲ್ ಮ್ಯಾಪ್ ಬಾಂಬ್ ಶೆಲ್ಟರ್ಗಳ ಮಾಹಿತಿ ನೀಡುತ್ತಿದ್ದು, ಅವುಗಳಲ್ಲಿ ಬಹುತೇಕವು ಅಂಡರ್ಗ್ರೌಂಡ್ ಮೆಟ್ರೋಗಳಲ್ಲಿವೆ ಎಂಬ ಮಾರ್ಗದರ್ಶನವನ್ನೂ ಮಾಡಿದೆ.
ಭಾರತೀಯ ವಿದೇಶಾಂಗ ಸಚಿವಾಲಯದ ಮಾಹಿತಿ ಪ್ರಕಾರ 18 ಸಾವಿರ ಭಾರತೀಯರು ಯೂಕ್ರೇನ್ನಲ್ಲಿ ಸಿಲುಕಿಕೊಂಡಿದ್ದು, ಅವರೆಲ್ಲರನ್ನೂ ಸುರಕ್ಷಿತವಾಗಿ ಕರೆಸಿಕೊಳ್ಳುವ ಕುರಿತ ಪ್ರಯತ್ನ ಜಾರಿಯಲ್ಲಿ ಇರುವುದಾಗಿ ಅದು ಹೇಳಿಕೊಂಡಿದೆ.