HEALTH TIPS

ವಿದೇಶದಲ್ಲಿ ಭಾರತಕ್ಕೆ ದೊಡ್ಡ ಯಶಸ್ಸು; ಮುಂಬೈ ಸರಣಿ ಬ್ಲಾಸ್ಟ್‌ನ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅಬುಬಕರ್ ಬಂಧನ!

       ಮುಂಬೈ: ಅನೇಕ ದೇಶಗಳಲ್ಲಿ ನಡೆಯುತ್ತಿರುವ ಭಾರತದ ಪ್ರಮುಖ ಶೋಧ ಕಾರ್ಯಾಚರಣೆಯಲ್ಲಿ ಭಾರತೀಯ ಏಜೆನ್ಸಿಗಳಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಮುಂಬೈ 1993ರ ಸರಣಿ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ಅಬು ಬಕರ್ ನನ್ನು ಬಂಧಿಸುವಲ್ಲಿ ಭಾರತೀಯ ಏಜೆನ್ಸಿಗಳು ಯಶಸ್ವಿಯಾಗಿವೆ. 

      ಈ ಉಗ್ರರ ಕೃತ್ಯದಲ್ಲಿ ಮುಂಬೈನ ವಿವಿಧ ಸ್ಥಳಗಳಲ್ಲಿ 12 ಬಾಂಬ್ ಸ್ಫೋಟಗಳು ಸಂಭವಿಸಿವೆ. ಮುಂಬೈ ಸರಣಿ ಬ್ಲಾಸ್ಟ್ ನಲ್ಲಿ 257 ಮಂದಿ ಸಾವಿಗೀಡಾಗಿದ್ದರೆ 713 ಜನರು ಗಾಯಗೊಂಡಿದ್ದರು. ಮಾಹಿತಿ ಪ್ರಕಾರ ಇದೀಗ ಬಂಧಿತ ಉಗ್ರ ಅಬು ಬಕರ್ ನನ್ನು ಯುಎಇಯಿಂದ ಭಾರತಕ್ಕೆ ಕರೆತರಲಾಗುತ್ತಿದೆ.

     ಬಂಧಿತ ಭಯೋತ್ಪಾದಕನ ಹೆಸರು ಅಬು ಬಕರ್, ಪಿಒಕೆಯಲ್ಲಿ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ತರಬೇತಿಯ ಜೊತೆಗೆ ಸರಣಿ ಸ್ಫೋಟಗಳಲ್ಲಿ ಬಳಸಲಾದ ಆರ್‌ಡಿಎಕ್ಸ್ ಲ್ಯಾಂಡಿಂಗ್‌ನಲ್ಲಿ ಭಾಗಿಯಾಗಿದ್ದ. ಮುಂಬೈನಲ್ಲಿ ಸರಣಿ ಬಾಂಬ್ ಬ್ಲಾಸ್ಟ್ ಬಳಿಕ ಅಬು ಬಕರ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದ. ಭಾರತೀಯ ಏಜೆನ್ಸಿಗಳ ಇನ್ ಪುಟ್ ಮೇರೆಗೆ ಅಬು ಬಕರ್ ನನ್ನು ಇತ್ತೀಚೆಗೆ ಯುಎಇಯಲ್ಲಿ ಬಂಧಿಸಲಾಯಿತು.

     ಹಿಂದೆಯೂ 2019ರಲ್ಲಿ ಅಬು ಬಕರ್ ನನ್ನು ಬಂಧಿಸಲಾಗಿತ್ತು. ಆದರೆ ಕೆಲವು ದಾಖಲೆಗಳ ಹಿನ್ನೆಲೆಯಲ್ಲಿ ಯುಎಇ ಅಧಿಕಾರಿಗಳ ಬಂಧನದಿಂದ ಬಿಡುಗಡೆಗೊಳ್ಳುವಲ್ಲಿ ಅಬು ಬಕರ್ ಯಶಸ್ವಿಯಾಗಿದ್ದನು. ದೀರ್ಘ ಕಾಲದಿಂದ ದೇಶದ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿದ್ದ ಅಬು ಬಕರ್ ನನ್ನು ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಭಾರತೀಯ ಏಜೆನ್ಸಿಗಳು ಯಶಸ್ವಿಯಾಗಿವೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. ಸುಮಾರು 29 ವರ್ಷಗಳ ಬಳಿಕ ಯುಎಇಯಿಂದ ಮರಳಿ ಕರೆತಂದ ನಂತರ ಮೋಸ್ಟ್ ವಾಂಟೆಡ್ ಅಬು ಬಕರ್ ಭಾರತದಲ್ಲಿ ಕಾನೂನನ್ನು ಎದುರಿಸಬೇಕಾಗುತ್ತದೆ.

      ದಾವೂದ್ ಇಬ್ರಾಹಿಂನ ಆಪ್ತನಾಗಿರುವ ಅಬು ಬಕರ್, ಮೊಹಮ್ಮದ್ ಮತ್ತು ಮುಸ್ತಫಾ ದೊಸ್ಸಾ ಅವರೊಂದಿಗೆ ಕಳ್ಳಸಾಗಣೆಯಲ್ಲಿ ತೊಡಗಿದ್ದ ಈತನ ಪೂರ್ಣ ಹೆಸರು ಅಬು ಬಕರ್ ಅಬ್ದುಲ್ ಗಫೂರ್ ಶೇಖ್. ಗಲ್ಫ್ ರಾಷ್ಟ್ರಗಳಿಂದ ಮುಂಬೈ ಮತ್ತು ಹತ್ತಿರದ ಲ್ಯಾಂಡಿಂಗ್ ಪಾಯಿಂಟ್‌ಗಳಿಗೆ ಚಿನ್ನ, ಬಟ್ಟೆ ಮತ್ತು ಎಲೆಕ್ಟ್ರಾನಿಕ್ಸ್ ಕಳ್ಳಸಾಗಣೆ ಮಾಡುತ್ತಿದ್ದನು.

     1997ರಲ್ಲಿ ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು. ಅಂದಿನಿಂದ ಈತನ ಬಂಧನಕ್ಕಾಗಿ ಭಾರತೀಯ ಏಜೆನ್ಸಿಗಳು ಹುಡುಕಾಟ ನಡೆಸುತ್ತಿತ್ತು. ಇದೀಗ ಅಬುಬಕರ್ ನನ್ನು ಯುಎಇಯಿಂದ ಹಸ್ತಾಂತರ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ಅಬು ಬಕರ್ ಇರಾನ್ ಮಹಿಳೆಯೊಂದಿಗೆ ಎರಡನೇ ಮದುವೆ ಮಾಡಿಕೊಂಡಿದ್ದಾನೆ.

     ಕೇಂದ್ರೀಯ ಏಜೆನ್ಸಿಗಳ ಉನ್ನತ ಮೂಲಗಳು ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ಮೋಸ್ಟ್ ವಾಂಟೆಡ್ ಆರೋಪಿ ಅಬು ಬಕರ್ ಹಸ್ತಾಂತರ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries