ನವದೆಹಲಿ: ಭಾರತೀಯ ಕ್ರಿಕೆಟ್ ಲೆಜೆಂಡ್ ಸುನಿಲ್ ಗವಾಸ್ಕರ್ ಕೆಲವು ಕ್ರಿಕೆಟಿಗರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಐಪಿಎಲ್ ಗುಂಗಿನಲ್ಲಿ ಆಟಗಾರರು ದೇಶವನ್ನು ಪ್ರತಿನಿಧಿಸುವಾಗ ಶ್ರಮಿಸುವುದಿಲ್ಲ ಎಂದು ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಿಒಐ ಗೆ ಬರೆದಿರುವ ಅಂಕಣದಲ್ಲಿ "ಐಪಿಎಲ್ ಹರಾಜು ಎಲ್ಲಾ ಆಟಗಾರರಿಗೂ ಜೀವನವನ್ನೇ ಬದಲಾಯಿಸುವುದಾಗಿದೆ. ಈ ಕಾರಣದಿಂದ ಐಪಿಎಲ್ ಇರುವಾಗ ದೇಶಕ್ಕಾಗಿ ಶ್ರಮಿಸಿ ಆಡದಂತೆ ಆಟಗಾರರನ್ನು ಮಾಡುತ್ತದೆ ಎಂದು ಗವಾಸ್ಕರ್ ಬರೆದಿದ್ದಾರೆ.
ಮುಂದುವರೆದು, ಐಪಿಎಲ್ ಹೊರತಾದ ಪಂದ್ಯಗಳಲ್ಲಿ ಶ್ರಮ ವಹಿಸಿ ಪೆಟ್ಟಾದರೆ ಐಪಿಎಲ್ ಟೂರ್ನಿಯಲ್ಲಿ ಫಿಟ್ ಆಗಿರಲು ಸಾಧ್ಯವಿಲ್ಲ ಎಂಬುದಕ್ಕಾಗಿ ಈ ರೀತಿಯ ಧೋರಣೆ ಅನುಸರಿಸುತ್ತಿದ್ದಾರೆ.
ಐಪಿಎಲ್ ನಲ್ಲಿ ಹರಾಜಾಗದೇ ಉಳಿದ ಆಟಗಾರರ ಬಗ್ಗೆಯೂ ಗವಾಸ್ಕರ್ ಮಾತನಾಡಿದ್ದು, ಬಿಕರಿಯಾಗದೇ ಉಳಿದ ಆಟಗಾರರು ನಿರಾಶರಾಗಬಾರದು, ಬದಲಿ ಆಟಗಾರನಿಗೆ ಎಂದಿಗೂ ಅವಕಾಶವಿರಲಿದೆ ಎಂದು ಹೇಳಿದ್ದಾರೆ.
"ಬಿಕರಿಯಾಗದೇ ಉಳಿದ ದುರದೃಷ್ಟಶಾಲಿಗಳಿಗೆ, ಫ್ರಾಂಚೈಸಿಗಳು ಇವರನ್ನು ತೆಗೆದುಕೊಳ್ಳದೇ ತಪ್ಪು ಮಾಡಿದೆವು ಎಂಬುದನ್ನು ಸಾಬೀತುಪಡಿಸುವ ಅವಕಾಶ ಇದೆ" ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.