ಬದಿಯಡ್ಕ: ಶುದ್ದ ಅಂತಃಕರಣದಿಂದ ಮಾಡುವ ಯಾವುದೇ ಕರ್ಮಗಳಿಗೂ ಭಗವದನುಗ್ರಹ ಪ್ರಾಪ್ತಿಯಾಗುತ್ತದೆ.ಪ್ರಪಂಚವನ್ನೇ ಧರ್ಮ ಪ್ರವಾಹದಲ್ಲಿ ಕೊಂಡೊಯ್ಯುವ ಶಕ್ತಿ ಇರುವುದು ಭರತ ಭೂಮಿಯಲ್ಲಿ ಮಾತ್ರ. ಇಲ್ಲಿಯ ದ್ಯೆವಿಕ ಸಂಕೀರ್ಣಗಳೇ ನಮಗೆ ಶ್ರೀರಕ್ಷೆ ಎಂದು ಖ್ಯಾತ ವಾಗ್ಮಿ, ತಂತ್ರಿವರ್ಯ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹೇಳಿದರು.
ನೀರ್ಚಾಲು ಸಮೀಪದ ಶ್ರೀ ಕಂಠಪ್ಪಾಡಿ ಶ್ರಿಸುಬ್ರಹ್ಮಣ್ಯ ದೇವಾಲಯ ಕುಕ್ಕಂಗೋಡ್ಲು ಇಲ್ಲಿ ನಡೆದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಭಾನುವಾರ ಸಂಜೆ ನಡೆದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸನಾತನ ಧರ್ಮದ ಆಂತರಿಕ ಸೌಂದರ್ಯಕ್ಕೆ ಇಲ್ಲಿಯ ವ್ಯೆವಿಧ್ಯಮಯ ಆಚರಣೆ, ನಂಬಿಕೆಗಳು ಬೆಂಬಲನೀಡಿ ಪರಿಪೆÇೀಶಿಸುತ್ತಿದೆ ಎಂದರು.
ಹಿರಿಯ ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಸಮಾರೋಪ ಭಾಷಣಮಾಡಿ, ಬರಿ ಕ್ಯೆಯಲ್ಲಿ, ಬರಿ ಮ್ಯೆಯಲ್ಲಿ ಭೂಮಿಯಲ್ಲಿ ಜನಿಸಿದ ನಮ್ಮ ಬದುಕನ್ನು ಭಗವಂತನ ಅನುಗ್ರಹ, ಕೃಪೆಗಳಿಂದ ಸಾರ್ಥಕಪಡಿಸಿಕೊಳ್ಳಬೇಕು. ದೇವರು ಕೇಳಿದ್ದನ್ನು ಕೊಡುವವನಲ್ಲ. ಮಾಡಿದ್ದಕ್ಕೆ ಬೇಕಾದಷ್ಟು ಅನುಗ್ರಹಿಸುವವನು. ಸತ್ಕರ್ಮ, ಸತ್ ಚಿಂತನೆಗಳಿಂದ ಸಾಯುಜ್ಯದೆಡೆಗೆ ಸಾಗುವುದೇ ಮಾನವ ಜನ್ಮದ ಅಂತಿಮ ಲಕ್ಷ್ಯ ಎಂದವರು ತಿಳಿಸಿದರು.
ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ನರೇಶ್ ರೈ ದೆಪ್ಪುಣಿಗುತ್ತು ಅಧ್ಯಕ್ಷತೆವಹಿಸಿ ಮಾತನಾಡಿ, ಜೀವರಾಶಿಗಳ ಸಕಲ ನೆಮ್ಮದಿಗೂ ಭಗವಂತನ ಕಟಾಕ್ಷವಿಲ್ಲದೆ ಅಸಾಧ್ಯ. ನಮ್ಮೆಲ್ಲ ಪ್ರಯತ್ನಗಳಿಗೂ ಜೀವಸೆಲೆಯಾದ ಭಗವಂತನ ಅನುಗ್ರಹ ಇನ್ನಷ್ಟು ಕರ್ಮ ಮಾರ್ಗದಲ್ಲಿ ಮುನ್ನಡೆಯಲು ದಾರಿತೋರಿಸುತ್ತದೆ. ಊರ-ಪರವೂರ ಸಹೃದಯರ ನೆರವಿಂದ ಪ್ರತಿಷ್ಠಾ ಬ್ರಹ್ಮಕಲಶ ಯಶಸ್ವಿಯಾಗಿದೆ ಎಂದರು.
ಖ್ಯಾತ ಜ್ಯೋತಿಷ್ಯ ವಿದ್ವಾನ್. ಪದ್ಮನಾಭ ಶರ್ಮ ಬೇಳ ಇರಿಞõÁಲಕುಡ ಉಪಸ್ಥಿತರಿದ್ದು ಮಾತನಾಡಿದರು.
ಕರ್ನಾಟಕ ಬ್ಯಾಂಕ್ ನೀರ್ಚಾಲು ಶಾಖಾ ಪ್ರಬಂಧಕ ಅನಂತಗೋಪಾಲಕೃಷ್ಣ, ಕಾಸರಗೋಡು ನಗರಸಭೆ ಸದಸ್ಯೆ ಐ. ಸವಿತಾ ಟೀಚರ್, ಜಿ.ಪಂ.ಸದಸ್ಯೆ ಶ್ಯೆಲಜಾ ಭಟ್, ಬ್ಲಾ.ಪಂ.ಸದಸ್ಯೆ ಅಶ್ವಿನಿ ಭಟ್, ಮ್ಯೆನಾ ಜಿ.ರೈ, ರಾಜೇಶ್ವರಿ ಉಳಿಪ್ಪಾಡಿ ಗುತ್ತು, ಕೆ.ಎನ್.ವೆಂಕಟರಮಣ ಹೊಳ್ಳ ಕಾಸರಗೋಡು ಉಪಸ್ಥಿತರಿದ್ದು ಮಾತನಾಡಿದರು.
ಕೋಳಾರು ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿ, ಚಂದ್ರಹಾಸ ರೈ ವಂದಿಸಿದರು. ಮಹೇಶ್ ಭಟ್ ವಳಕ್ಕುಂಜ ನಿರೂಪಿಸಿದರು.