ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಇದೇ 20ರಂದು ಮತದಾನ ನಡೆಯಲಿದೆ. ಮತ ಚಲಾಯಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಹೊಸ ತಂತ್ರದ ಮೊರೆಹೋಗಿದೆ.
ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಇದೇ 20ರಂದು ಮತದಾನ ನಡೆಯಲಿದೆ. ಮತ ಚಲಾಯಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಹೊಸ ತಂತ್ರದ ಮೊರೆಹೋಗಿದೆ.
ಹಾಲು, ಬ್ರೆಡ್ ಮಾರಾಟದ ವೇಳೆ ಗ್ರಾಹಕರಿಗೆ ಮತದಾನ ಜಾಗೃತಿ ಸಂದೇಶ ಕಳುಹಿಸಲು ಆಡಳಿತ ಮುಂದಾಗಿದೆ.
ಈ ಪ್ರಸ್ತಾವಕ್ಕೆ ಜಿಎಸ್‌ಟಿ ಮತ್ತು ಆಹಾರ ಸುರಕ್ಷತಾ ಇಲಾಖೆಯೂ ಬೆಂಬಲ ಸೂಚಿಸಿದೆ. ಒಂದು ವಾರದಲ್ಲಿ 2.5 ಲಕ್ಷ ಮನೆಗಳಿಗೆ ಮತದಾನ ಜಾಗೃತಿ ಸಂದೇಶ ಕಳುಹಿಸುವುದಾಗಿ ಹಾಲಿನ ಉತ್ಪನ್ನ, ಬ್ರೆಡ್ ತಯಾರಕರು ಭರವಸೆ ನೀಡಿದ್ದಾರೆ.
ಈ ಅಭಿಯಾನದಲ್ಲಿ ಸಕ್ರಿಯವಾಗಿ ಕೈಜೋಡಿಸುವಂತೆ ಎಲ್ಲ ಪ್ರತಿನಿಧಿಗಳಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.