ಕೊಚ್ಚಿ: ಐಎನ್ ಎಸ್ ವಿಕ್ರಾಂತ್ ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆಯೊಡ್ಡಿದ್ದ ತನಿಖೆಯಲ್ಲಿ ಮಹತ್ವದ ತಿರುವು ಲಭಿಸಿದೆ. ಮೂವರು ನೌಕಾ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಎನ್.ಐ.ಎ, ಎಟಿಎಸ್ ಮತ್ತು ಐಬಿ ವಿಭಾಗಗಳು ಪ್ರಶ್ನಿಸುತ್ತಿವೆ. ಬಾಂಬ್ ಬೆದರಿಕೆಯ ಪ್ರಮುಖ ಸಾಕ್ಷ್ಯಗಳು ಸಿಕ್ಕಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ನಿರ್ಮಾಣವಾಗುತ್ತಿರುವ ಐಎನ್ ಎಸ್ ವಿಕ್ರಾಂತ್ ನೌಕೆಯನ್ನು ಬಾಂಬ್ ಸ್ಫೋಟಿಸಿ ನಾಶಪಡಿಸಲಾಗುವುದು ಎಂಬ ಬೆದರಿಕೆ ಸಂದೇಶ ಬಂದಿದ್ದ ಹಿನ್ನೆಲೆಯಲ್ಲಿ ಈ ತನಿಖೆ ನಡೆಯುತ್ತಿದೆ.
ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಉದ್ಯೋಗಿಗಳಿಗೆ ಇಮೇಲ್‍ನಲ್ಲಿ ಬೆದರಿಕೆ ಸಂದೇಶ ಬಂದಿತ್ತು. ಐಎನ್‍ಎಸ್ ವಿಕ್ರಾಂತ್‍ನ ಅಂತಿಮ ಪರೀಕ್ಷೆಗಳ ನಂತರ ಅಂತಿಮ ಕಿರು-ಕೆಲಸಗಳು ಪ್ರಸ್ತುತ ನಡೆಯುತ್ತಿದ್ದವು. ಇದೇ ವೇಳೆ ಬಾಂಬ್ ಸ್ಫೋಟಗೊಳ್ಳಲಿದೆ ಎಂಬ ಸಂದೇಶ ಅಧಿಕಾರಿಗಳಿಗೆ ಬಂದಿತ್ತು. ಶಿಪ್ ಯಾರ್ಡ್ ನೀಡಿದ ದೂರಿನನ್ವಯ ಕೊಚ್ಚಿ ದಕ್ಷಿಣ ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆಯ ತನಿಖೆ ಪ್ರಗತಿಯಲ್ಲಿದೆ.