ಕಾಸರಗೋಡು: ಧೈರ್ಯ ಮತ್ತು ಆತ್ಮವಿಶ್ವಾಸವಿದ್ದರೆ ಎಂತಹ ಬಿಕ್ಕಟ್ಟನ್ನೂ ಎದುರಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾನೆ ಕುತ್ತಿಕೋಲ್ ಪಯ್ಯಂಗಾನ ಕಾಲೋನಿಯ ಅಮಲ್. ಸೆರೆಬ್ರಲ್ ಪಾಲ್ಸಿಗೆ ಚಿಕಿತ್ಸೆ ಪಡೆಯುತ್ತಿರುವ ಅಮಲ್ ನ ಕನಸುಗಳು ಅಪರಿಮಿತವಾಗಿವೆ. ವಿಕಲಚೇತನ ಮಕ್ಕಳ ರಾಜ್ಯ ಮಟ್ಟದ ಛದ್ಮವೇಷ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ಅಮಲ್ ಗಮನ ಸೆಳೆದಿದ್ದಾನೆ. ಗಣರಾಜ್ಯೋತ್ಸವದಂದು ಕಾಸರಗೋಡು ಬಿಆರ್‍ಸಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಅಮಲ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದ. ಆನ್‍ಲೈನ್ ಸ್ಪರ್ಧೆಯಲ್ಲಿ ಜವಾಹರಲಾಲ್ ನೆಹರು ವೇಶ ಧರಿಸಿ ಪಾತ್ರವನ್ನು ನಿರ್ವಹಿಸಿದ್ದ.
ಅಮಲ್ ಪಯ್ಯಂಗಾನ ಕಾಲೋನಿಯ ಕೆ ಉಮೇಶ್ ಮತ್ತು ಪಿಎಚ್ ಸಿಂಧು ದಂಪತಿಯ ಪುತ್ರ. ನಡೆಯಲು ಕಷ್ಟಪಡುತ್ತಿರುವ ಅಮಲ್‍ಗೆ ಸಹಾಯ ಮಾಡಲು ಯಾರಾದರೂ ಬೇಕು. ಕುತ್ತಿಕೋಲ್ ಎಯುಪಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿರುವ ಅಮಲ್‍ಗೆ ಪೋಷಕರು ಮತ್ತು ಶಿಕ್ಷಕರು ಬೆಂಬಲ ನೀಡಿದ್ದಾರೆ.
ಪಯ್ಯಂಗಾನ ಸಮಾಜ ಅಧ್ಯಯನ ಕೊಠಡಿಯು ಅಮಲ್ ಅವರ ಸಾಧನೆಯ ಬಗ್ಗೆ ಅಭಿನಂದನಾ ಸಮಾರಂಭ ಆಯೋಜಿಸಿತ್ತು. ಕುತ್ತಿಕೋಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುರಳಿ ಪಯ್ಯಂಗಾನ ಉದ್ಘಾಟಿಸಿದರು.ಗ್ರಾಮ ಪಂಚಾಯಿತಿ ಸದಸ್ಯೆ ಶಾಂತಾ ಪಯ್ಯಂಗಾನ ಅಧ್ಯಕ್ಷತೆ ವಹಿಸಿದ್ದರು. ಗಿರಿಜನ ವಿಸ್ತರಣಾಧಿಕಾರಿ ಕೆ.ಧನಲಕ್ಷ್ಮಿ, ಪಯ್ಯಂಗಾನ ಉರುಮೂಪ್ಪನ್ ಸಿ.ಪಿ.ರಾಮನ್, ಎಸ್ಟಿ ಪ್ರಮೋಟರ್ ರಾಘವನ್ ಮೊಟ್ಟ ಮಾತನಾಡಿದರು. ಅಧ್ಯಯನ ಕೊಠಡಿ ಸಂಚಾಲಕಿ ಪಿ.ಎಂ.ಶಾಲಿನಿ ಸ್ವಾಗತಿಸಿ, ಕರಿಷ್ಮಾ ಗೋಪಿ ವಂದಿಸಿದರು.