HEALTH TIPS

ಪುರುಷರೇ, ಕೂದಲು ಉದುರುವುದನ್ನು ತಡೆಗಟ್ಟಲು ಹೀಗೆ ಆರೈಕೆ ಮಾಡಿ

 ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ, ಆದರೆ ಮಹಿಳೆಯರಿಗಿಂತ ಪುರುಷರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚು. ಮಹಿಳೆಯರಲ್ಲಿ ಕೂದಲು ಉದುರಿ ತುಂಬಾ ತೆಳುವಾಗುವುದು, ಬಕ್ಕತಲೆಯಾಗುವುದು ತುಂಬಾ ವಿರಳ, ಆದರೆ ಪುರುಷರಲ್ಲಿ ಬಕ್ಕ ತಲೆಯ ಸಮಸ್ಯೆ ಹೆಚ್ಚು.

ತುಂಬಾ ಚಿಕ್ಕ ಪ್ರಾಯದಲ್ಲಿ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ, 30 ವರ್ಷದೊಳಗೆ ಬಕ್ಕತಲೆ ಉಂಟಾಗುತ್ತಿದೆ. ಕೂದಲು ಉದುರಿ ಬಕ್ಕತಲೆ ಉಂಟಾದರೆ ಸೌಂದರ್ಯ ಸಮಸ್ಯೆ ಉಂಟಾಗುವುದು ಮಾತ್ರ ಕೆಲವರಿಗೆ ವಿವಾಹವಾಗಲು ಹೆಣ್ಣು ಸಿಗಲು ಕೂಡ ಸಮಸ್ಯೆ ಉಂಟಾಗುವುದು.

ಕೂದಲು ಕೆಲವರಿಗೆ ವಂಶಪಾರಂಪರ್ಯವಾಗಿ ಕಂಡು ಬಂದರೆ ಇನ್ನು ಕೆಲವರಿಗೆ ಕೂದಲಿನ ಆರೈಕೆ ಸರಿಯಾಗಿ ಮಾಡದೇ ಇರುವ ಕಾರಣಕ್ಕೆ ಉದುರಿ ಹೋಗುತ್ತದೆ.

ಕೂದಲು ಉದುರುವುದನ್ನು ತಡೆಗಟ್ಟಬೇಕೆಂದರೆ ಪುರುಷರು ತಮ್ಮ ಕೂದಲಿನ ಆರೈಕೆ ಹೇಗೆ ಮಾಡಬೇಕೆಂಬ ಟಿಪ್ಸ್ ನೀಡಿದ್ದೇವೆ ನೋಡಿ:

1. ತಲೆ ಬುಡವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ತಲೆ ಬುಡ ಕ್ಲೀನ್ ಆಗಿದ್ದರನೇ ಅದು ಆ ಆರೋಗ್ಯವಾಗಿರಲು ಸಾಧ್ಯ. ತಲೆ ಬುಡ ಸ್ವಚ್ಛವಾಗಿಲ್ಲದಿದ್ದರೆ ಬ್ಯಾಕ್ಟಿರಿಯಾಗಳು ಉತ್ಪತ್ತಿಯಾಗಿ ಫಾಲಿಕ್ಲೆಸ್(ಕೂದಲನ್ನು ಬಲವಾಗಿಸುವ ಅಂಶ) ಮೇಲೆ ಪರಿಣಾಮ ಬೀರುವುದು.
2. ಸರಿಯಾದ ಉತ್ಪನ್ನಗಳನ್ನು ಬಳಸಿ ನಿಮ್ಮ ಕೂದಲು ಯಾವ ಟೈಪ್‌ ಇದೆಯೋ ಅದಕ್ಕೆ ಹೊಂದುವ ಹೇರ್‌ ಪ್ರಾಡೆಕ್ಟ್ ಬಳಸಿ. ಕೂದಲು ತೆಳುವಾಗಿದೆಯೇ, ಮಂದವಾಗಿದೆಯೇ, ಸ್ಟ್ರೈಟ್ ಇದೆಯೇ, ಗುಂಗುರು ಇದೆಯೇ ಅದರಂತೆ ಕೂದಲಿನ ಆರೈಕೆ ಮಾಡಬೇಕು. ಇವೆಲ್ಲಾ ಕೂದಲಿನ ಆರೈಕೆಗೆ ಮುಖ್ಯ.

3. ಕಪ್ಪು ಕೂದಲಿನ ಆರೈಕೆ ನಿಮ್ಮ ಕಪ್ಪು ಕೂದಲಾಗಿದ್ದರೆ ವಾರದಲ್ಲಿ ಒಂದು ಬಾರಿ ಶ್ಯಾಂಪೂ ಹಾಕಿ ತೊಳೆಯಿರಿ, ಉಳಿದ ದಿನ ಹಾಗೇ ತೊಳೆಯಿರಿ. ನಿಮ್ಮ ಶಾರ್ಟ್ ಕೂದಲಾಗಿದ್ದಾರೆ ಪ್ರತೀ ಮೂರು ವಾರಗಳಿಗೊಮ್ಮೆ ಹೇರ್ ಕಟ್ ಮಾಡಿಸಿ. ಒಂದು ವೇಳೆ ಉದ್ದ ಕೂದಲಾಗಿದ್ದರೆ ಕೂದಲಿನ ಆರೈಕೆಗೆ ಸರಿಯಾದ ವಸ್ತುಗಳನ್ನೇ ಬಳಸಿ. ಶಿಯಾ ಬಟರ್ ಅಥವಾ ಅವಕಾಡೋ ಆಯಿಲ್ ಇರುವ ಉತ್ಪನ್ನಗಲನ್ನು ಬಳಸಿ.
4. ನಿಮ್ಮದು ಉದ್ದ ಕೂದಲಾಗಿದ್ದರೆ ಉದ್ದ ಕೂದಲಾಗಿದ್ದರೆ 12 ವಾರಗಳಿಗೊಮ್ಮೆ ಹೇರ್‌ ಶೇಪ್ ಮಾಡಿಸಿ. ಸಲೂನ್‌ಗೆ ಹೋದಾಗ ಹೇರ್ ಕಟ್ ಅಂತ ಹೇಳಬೇಡಿ, ಶೇಪ್ ಮಾಡಿ ಅಂತ ಹೇಳಿ, ಆಗ ಅವರು ಕೂದಲನ್ನು ಹೆಚ್ಚು ಕತ್ತರಿಸದೆ ಶೇಪ್‌ ಮಾಡಿ ಕೊಡುತ್ತಾರೆ. ಕೂದಲಿಗೆ ಬ್ಲೋ ಡ್ರೈಯರ್ ಬಳಸುವುದು, ಸ್ಟ್ರೈಟ್ನಿಂಗ್‌ ಅಥವಾ ಕರ್ಲಿಂಗ್‌ ಮಾಡುತ್ತಿದ್ದರೆ ಕುದಲು ಹಾಳಾಗುವುದು. ಕೂದಲಿನ ಆರೈಕೆಗೆ ಒಳ್ಳೆಯ ಉತ್ಪನ್ನಗಳನ್ನೇ ಬಳಸಿ.
5. ಕೂದಲು ಬಿಳಿಯಾಗಿದ್ದರೆ ವಯಸ್ಸಾಗುತ್ತಿದ್ದಂತೆ ಕೂದಲು ಬಿಳಿಯಾಗುವುದು ಸ್ವಾಭಾವಿಕ ದೇಹದಲ್ಲಿ ಮೆಲಾಲಿನ್ ಉತ್ಪತ್ತಿ ಕಡಿಮೆಯಾಗುತ್ತಿದ್ದಂತೆ ಕೂದಲು ಬಿಳಿಯಾಗುವುದು. ಹೇರ್ ಕಲರ್‌ ಮಾಡುವುದಾದರೆ ಕಡಿಮೆ ರಾಸಾಯನಿಕವಿರುವ ಉತ್ಪನ್ನಗಳನ್ನು ಬಳಸಿ. ಬಿಳಿ ಕೂದಲು ಈಗ ಸ್ಟೈಲಿಷ್ ಆಗಿರುವುದರಿಂದ ಅವುಗಳನ್ನು ನೀಟಾಗಿ ಕತ್ತರಿಸಿ, ಶಾರ್ಟ್ ಆಗಿಟ್ಟರೆ ತುಂಬಾ ಚೆನ್ನಾಗಿ ಕಾಣುವುದು.
ಮಾಯಿಶ್ಚರೈಸರ್‌ಗೆ ಟಿಪ್ಸ್ ನಿಮ್ಮ ಕೂದಲಿಗೆ ಎಷ್ಟು ಮಾಯಿಶ್ಚರೈಸರ್ ಬೇಕೆಂಬುವುದು ನಿಮ್ಮ ಕೂದಲಿನ ಟೈಪ್ ಅವಲಂಬಿಸಿದೆ. ನೀವು ಕೂದಲನ್ನು ತೊಳೆಯುವಾಗ ಕಂಡೀಷನರ್ ಬಳಸಿ. ಬರೀ ಶ್ಯಾಂಪೂ ಬಳಸಿದರೆ ಕೂದಲು ಬುಡ ಒಣಗಿ ಕೂದಲು ತುಂಡಾಗಬಹುದು. ನಿಮ್ಮ ಕೂದಲು ಸೂಪರ್‌ ಫೈನ್ ಆಗಿರಲು ಕೂದಲು ವಾಶ್‌ ಬಳಿಕ ಸ್ಪ್ರೇ ಕಂಡೀಷನರ್ ಬಳಸುವುದು ಒಳ್ಳೆಯದು. ಅಲ್ಲದೆ ಸಾಕಷ್ಟು ನೀರು ಕುಡಿಯಬೇಕು, ಆರೋಗ್ಯಕರ ಆಹಾರ ಸೇವಿಸಬೇಕು ಜೊತೆಗೆ ಕೂದಲಿನ ಬೆಳವಣಿಗೆಗೆ ಅವಶ್ಯಕವಾದ ಸಪ್ಲಿಮೆಂಟ್ ತೆಗೆದುಕೊಳ್ಳಿ.
ಕೂದಲು ತುಂಬಾ ಒರಟಾಗುತ್ತಿದ್ದರೆ ನಿಮ್ಮ ಕೂದಲು ತುಂಬಾ ಒರಟಾಗಿದ್ದರೆ ಟೀ ಟಟ್ರೀ ಆಯಿಲ್ ಬಳಸಿ, ಇದರಿಂದ ಡ್ರೈಯಾಗುವುದು ಕಡಿಮೆಯಾಗುವುದು, ಇದನ್ನು ವಾರಕ್ಕೊಮ್ಮೆ ಬಳಸುತ್ತಾ ಬನ್ನಿ. ಉಳಿದಂತೆ ಮೈಲ್ಡ್ ಶ್ಯಾಂಪೂ ಹಚ್ಚಿ ತಲೆ ತೊಳೆಯಿರಿ. ಅಲ್ಲದೆ ತಲೆಗೆ ತೆಂಗಿನೆಣ್ಣೆ, ಲೋಳೆಸರ ಬಳಸಿ.
ಕೂದಲು ತುಂಬಾ ಎಣ್ಣೆ-ಎಣ್ಣೆಯಾಗುತ್ತಿದೆಯೇ? ಕೆಲವರಿಗೆ ಕುದಲು ತುಂಬಾ ಎಣ್ಣೆ-ಎಣ್ಣೆಯಾಗುತ್ತದೆ, ತಲೆಯಲ್ಲಿ ತುಂಬಾ ಸೆಬಮ್‌ ಉತ್ಪತ್ತಿಯಾಗುವುದರಿಂದ ಕೂದಲು ಎಣ್ಣೆ-ಎಣ್ಣೆಯಾಗುವುದು.ಅಲ್ಲದೆ ಇನ್ನಿತರ ಕಾರಣಗಳಿಂದಲೂ ಕೂದಲು ಎಣ್ಣೆ-ಎಣ್ಣೆಯಾಗುವುದು. ತುಂಬಾ ವ್ಯಾಯಾಮ ಮಾಡಿದಾಗ ತಲೆ ಬೆವರಿ ಕೂದಲು ಜಿಡ್ಡು-ಜಿಡ್ಡಾಗುವುದು, ಅಲ್ಲದೆ ತಲೆ ಸತಿಯಾಗಿ ತೊಳೆಯದಿದ್ದರೆ ಕೂದಲು ಜಿಡ್ಡು-ಜಿಡ್ಡಾಗಿ ಕಾಣುವುದು. ಮಿಂಟ್ ಮೆಂಥೋಲ್ ಇರುವ ಶ್ಯಾಂಪೂ ಬಳಸಿ ತಲೆ ತೊಳೆಯಿರಿ, ಇದರಿಂದ ಜಿಡ್ಡಿನಂಶ ಇಲ್ಲವಾಗುವುದು.
ಕೂದಲು ಉದುರುತ್ತಿದೆಯೇ? ಕೂದಲು ತುಂಬಾ ಉದುರುತ್ತಿದ್ದರೆ ಆರಂಭದಲ್ಲಿಯೇ ಚಿಕಿತ್ಸೆ ಮಾಡಿದರೆ ಕೂದಲು ಉದುರುವುದು ಕಡಿಮೆಯಾಗುವುದು. ಕೂದಲು ಉದುರುವುದನ್ನು ತಡೆಗಟ್ಟಲು Rogaine Foam ಬಳಸಿ. ಇದನ್ನು ಬಳಸಲು FDA ಅನುಮತಿ ನೀಡಿದ್ದು ದಿನದಲ್ಲಿ ಎರಡು ಬಾರಿ ಬಳಸಿ. ಮತ್ತೊಂದು ಆಯ್ಕೆಯೆಂದರೆ Propecia ಬಳಸುವುದು. ಇದು ಕೂದಲು ಉದುರುವುದನ್ನು ತಡೆಗಟ್ಟಲು ಹಾಗೂ ಕೂದಲು ಮತ್ತೆ ಹುಟ್ಟಲು ಸಹಕಾರಿಯಾಗಿದೆ. ಯಾವಾಗ ತಜ್ಞರನ್ನು ಭೇಟಿಯಾಗಬೇಕು? * ಕೂದಲು ತುಂಬಾ ಉದುರುತ್ತಿದ್ದರೆ * ಕೂದಲು ಉದುರಿ ತುಂಬಾ ತೆಳುವಾಗುತ್ತಿದ್ದರೆ ಸೂಕ್ತ ತಜ್ಞರನ್ನು ಕಂಡು ಚಿಕಿತ್ಸೆ ಪಡೆದರೆ ಕೂದಲು ಉದುರುವುದನ್ನು ತಡೆಗಟ್ಟಬಹುದು.




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries