HEALTH TIPS

ನದಿ ಪ್ರವಾಹ ಪ್ರದೇಶದಲ್ಲಿ ಹೊಸ ಕೈಗಾರಿಕೆ ಸ್ಥಾಪನೆಗೆ ನಿಷೇಧ; ಗಂಗಾ ಯೋಜನೆಗಳಿಗೆ ವಿನಾಯಿತಿ

            ನವದೆಹಲಿ: ಗಂಗಾನದಿ ಉಳಿವಿಗಾಗಿ ಕೈಗೊಂಡಿರುವ ಯೋಜನೆಗಳ ಪೈಕಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಮುಂದಡಿ ಇಟ್ಟಿದ್ದು, ಗಂಗಾ ನದಿ ಪ್ರವಾಹ ಪ್ರದೇಶದಲ್ಲಿ ಹೊಸ ಕೈಗಾರಿಕೆ ಸ್ಥಾಪನೆಗೆ ನಿಷೇಧ ಹೇರಿದೆ.

               ಹೌದು.. ಗಂಗಾ ನದಿ ಪ್ರವಾಹದ ಪ್ರದೇಶಗಳಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಯನ್ನು ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಪ್ರದೇಶಗಳಲ್ಲಿ ಗಂಗಾ ಯೋಜನೆಗಳಿಗೆ ಮಾತ್ರ ನಿಷೇಧದಿಂದ ವಿನಾಯಿತಿ ನೀಡಿದೆ. ನದಿ ಉಳಿವಿಗಾಗಿ ಈ ಹಿಂದಿನ ಮಾರ್ಗಸೂಚಿಗಳನ್ನು ಬದಲಾವಣೆ ತಂದ ಕೇಂದ್ರ ಸರ್ಕಾರ  ಕೈಗಾರಿಕಾ ತಾಣಗಳು ಪ್ರವಾಹದಿಂದ ಕನಿಷ್ಠ 0.5 ಕಿಮೀ ಅಂತರವನ್ನು ಕಾಯ್ದುಕೊಳ್ಳಬೇಕು ಅಥವಾ ಅಣೆಕಟ್ಟಿನಿಂದ ಪ್ರಭಾವಿತವಾಗಿರುವ ಪ್ರವಾಹ ಪ್ರದೇಶವನ್ನು ಬದಲಾಯಿಸಬೇಕು ಎಂದು ಹೇಳಿದೆ.

                 ಅಂತೆಯೇ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEFCC) ನದಿಯ ಸಮೀಪದಲ್ಲಿರುವ ಕೈಗಾರಿಕೆಗಳಿಗೆ ಮಾರ್ಗಸೂಚಿಗಳನ್ನು ತಂದಿದ್ದು, ಕೈಗಾರಿಕೆಗಳ ಸ್ಥಳಗಳಿಗೆ ಸಂಬಂಧಿಸಿದ ಅಂಶವನ್ನು ಸಚಿವಾಲಯದಲ್ಲಿ ಚರ್ಚಿಸಲಾಗಿದೆ ಮತ್ತು ಜಲ ಶಕ್ತಿ ಸಚಿವಾಲಯ (MoJS)  ಸೇರಿದಂತೆ ಸಚಿವಾಲಯಗಳ ಬಳಿ ಸಲಹೆಗಳನ್ನು ಕೋರಲಾಗಿದೆ ಎಂದು ಹೇಳಿದೆ.

             ಗಂಗಾ ನದಿ ಮತ್ತು ಅದರ ಉಪನದಿಗಳ ಮಾಲಿನ್ಯ ನಿಯಂತ್ರಣಕ್ಕಾಗಿ ನಮಾಮಿ ಗಂಗೆ ಕಾರ್ಯಕ್ರಮದಡಿ ನಿರ್ಮಾಣ, ಅಭಿವೃದ್ಧಿ, ಒಳಚರಂಡಿ ಸಂಸ್ಕರಣಾ ಘಟಕಗಳ ನವೀಕರಣ, ಸ್ನಾನಘಟ್ಟಗಳು, ಸ್ಮಶಾನ ಮತ್ತು ಶೌಚಾಲಯಗಳಂತಹ ಚಟುವಟಿಕೆಗಳನ್ನು ನಿಷೇಧಿಸಲಾಗಿಲ್ಲ ಎಂದು ಮಾರ್ಗಸೂಚಿಗಳು ತಿಳಿಸಿವೆ.  ಈ ಕಾರ್ಯಕ್ರಮದ ಅಡಿಯಲ್ಲಿ ಜಲ ಶಕ್ತಿ ಸಚಿವಾಲಯವು ಕೈಗೊಳ್ಳುವ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಈ ಮಾರ್ಗಸೂಚಿಗಳಿಂದ ವಿನಾಯಿತಿ ನೀಡಲಾಗಿದೆ ಎಂದು ಅದು ಹೇಳಿದೆ.

                 ರಾಜ್ಯ ಜಲಸಂಪನ್ಮೂಲ ಇಲಾಖೆಯಿಂದ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಅಥವಾ ರಾಜ್ಯ ಸರ್ಕಾರದಿಂದ ಅಧಿಕೃತಗೊಂಡ ಯಾವುದೇ ಅಧಿಕಾರಿಯಿಂದ ಪ್ರಮಾಣೀಕರಿಸಲ್ಪಟ್ಟಂತೆ, 25 ವರ್ಷಗಳಲ್ಲಿ ಒಂದು ಪ್ರವಾಹಕ್ಕೆ ಅನುಗುಣವಾಗಿ ನದಿ ಪ್ರವಾಹದ ಪ್ರದೇಶದಲ್ಲಿ ಕೈಗಾರಿಕೆಗಳು ನೆಲೆಗೊಳ್ಳಬಾರದು” ಎಂದು  ಸಚಿವಾಲಯ ಹೊರಡಿಸಿದ ನಿರ್ದೇಶನದಲ್ಲಿ ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries