ಕಾಸರಗೋಡು: ಶೈಕ್ಷಣಿಕ ಸಾಲದ ಕುರಿತಾಗಿ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೂರು ದಿವಸಗಳ ಜಾಗೃತಿ ಸಹವಾಸ ಶಿಬಿರ ನಡೆಯಲಿದೆ. ನೆಹರೂ ಯುವ ಕೇಂದ್ರ ವತಿಯಿಂದ ಶಿಬಿರ ಆಯೋಜಿಸಲಾಗುತ್ತಿದೆ. ರಾಜ್ಯ ಸರ್ಕಾರದ ಅಧೀನದಲ್ಲಿ ತಿರುವನಂತಪುರದಲ್ಲಿ ಚಟುವಟಿಕೆ ನಡೆಸುತ್ತಿರುವ ಇನ್‍ಸ್ಟಿಟ್ಯೂಟ್ ಆಫ್ ಲ್ಯಾಂಡ್ ಆಂಡ್ ಡಿಸಾಸ್ಟರ್ ಮ್ಯೇನೇಜ್‍ಮೆಂಟ್ ಕಟ್ಟಡದಲ್ಲಿ ಏಪ್ರಿಲ್ ತಿಂಗಳಲ್ಲಿ ಶಿಬಿರ ನಡೆಯುವುದು.
ದೇಶ, ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಕೈಗೊಳ್ಳುವವರಿಗಾಗಿ ವಿದ್ಯಾಭ್ಯಾಸ ಸಾಲ ಪಡೆಯುವ ವಿಧಾನ, ಮಾರ್ಗನಿರ್ದೇಶಗಳ ಬಗ್ಗೆ ಶೀಬಿರದಲ್ಲಿ ಮಾಹಿತಿ ನೀಡಲಾಗುವುದು. ರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಸಹಕಾರದೊಂದಿಗೆ ಶಿಬಿರ ನಡೆಯಲಿದೆ. ಶಿಬಿರ ಸಂಪೂರ್ಣ ಉಚಿತವಾಗಿರಲಿದ್ದು, ವಸತಿ ಮತ್ತು ಆಹಾರದ ವೆಚ್ಚ ಅಭ್ಯರ್ಥಿಗಳು ಭರಿಸಬೇಕಾಗಿದೆ. ಶೈಕ್ಷಣಿಕ ಸಾಲದ ಉದ್ದೇಶ-ಲಕ್ಷ್ಯ, ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಆಖಲೆಗಳು, ಬಡ್ಡಿ ಹಾಗೂ ಸಾಲ ಮರುಪಾವತಿ ಬಗ್ಗೆ ಸಮಗ್ರ ಮಾಃಇತಿ ನೀಡಲಾಗುವುದು. ಶಿಬಿರದಲ್ಲಿ ನೀಡಲಾಗುವ ಪ್ರಮಾಣಪತ್ರ, ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಸಂದರ್ಭ ಪರಿಗಣಿಸಲ್ಪಡಲಿದೆ. ಶಿಬಿರದಲ್ಲಿ ಪಾಲ್ಗೊಳ್ಳಲಿಚ್ಛಿಸುವವರು ಫೆ. 15ರ ಮುಂಚಿತವಾಗಿ ದೂರವಾಣಿ ಸಂಖ್ಯೆ(9633031098)ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.