ಕಾಸರಗೋಡು: ಬೇಕಲ ಪ್ರವಾಸೋದ್ಯಮ ಯೋಜನೆಗಳ ಅಭಿವೃದ್ಧಿಗಾಗಿ ಕಾರ್ಯಾಚರಿಸುವುದರ ಜತೆಗೆ ಜವಾಬ್ದಾರಿಯುತ ಸ್ಥಾನದೊಂದಿಗೆ ಪ್ರವಾಸಿಗಳ ಅಭ್ಯುದಯಕ್ಕಾಘಿ ಶ್ರಮಿಸುವುದಾಗಿ ಬೇಕಲ್ ರೆಸಾರ್ಟ್ ಡೆವೆಲಪ್‍ಮೆಂಟ್ ಕಾರ್ಪೋರೇಶನ್(ಬಿಆರ್‍ಡಿಸಿ)ಎಂ.ಡಿ ಶಿಜಿನ್ ಪರಂಬತ್ ತಿಳಿಸಿದ್ದಾರೆ.
ಅವರು ಬೇಕಲ್ ಫೋರ್ಟ್ ಓಕ್ಸ್ ಸಭಾಂಗಣದಲ್ಲಿ ನಡೆದ ಜೆ.ಸಿ.ಐ ಬೇಕಲ ಕೋಟೆ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜೆ.ಸಿ.ಐ ಅಧ್ಯಕ್ಷ ಬಿ.ಕೆ ಸಲೀಂ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ವಲಯಾಧ್ಯಕ್ಷ ಕೆ. ಟಿ ಸಮೀರ್, ಅಬ್ದುಲ್ ನಾಸರ್ ಕಾಞಂಗಾಡ್, ಡಾ. ನಿಶಾಂತ್ ಬಾಲ್‍ಶ್ಯಾಂ ಉಪಸ್ಥೀತರಿದ್ದರು. ಈ ಸಂದರ್ಭ ಯುವ ಉದ್ಯಮಿಗಳಿಗಿರುವ ಪ್ರಶಸ್ತಿಯನ್ನು ಅಬ್ದುಲ್ ಖಾದರ್ ಪಳ್ಳಿಪುರ ಅವರಿಗೆ ಪ್ರದಾನ ಮಾಡಲಾಯಿತು. ಈ ಸಂದರ್ಭ 2022ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಎಂ. ಬಿ ಶಾನವಾಸ್ ಸ್ವಾಗತಿಸಿದರು. ಸಫ್‍ವಾನ್ ಅಹಮ್ಮದ್ ವಂದಿಸಿದರು.