HEALTH TIPS

ಎಲ್ಗಾರ್ ಪ್ರಕರಣ| ಆರೋಪಿಗಳು ಮೋದಿ ಸರ್ಕಾರ ಉರುಳಿಸಲು ಬಯಸಿದ್ದರು: ನ್ಯಾಯಾಲಯ

            ಮುಂಬೈಎಲ್ಗಾರ್ ಪರಿಷತ್ ಪ್ರಕರಣದ ಮೂವರು ಆರೋಪಿಗಳಿಗೆ ಇಲ್ಲಿನ ವಿಶೇಷ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.

            ಕಬೀರ್ ಕಲಾ ಮಂಚ್‌ಗೆ ಸೇರಿದ ಮೂವರು ಆರೋಪಿಗಳಾದ ಸಾಗರ್ ಗೋರ್ಖೆ, ರಮೇಶ್ ಗೈಚೋರ್ ಮತ್ತು ಜ್ಯೋತಿ ಜಗತಾಪ್ ಅವರಿಗೆ ವಿಶೇಷ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶ ಡಿ.ಇ.  ಕೊತಾಲಿಕರ್ ಸೋಮವಾರ ಜಾಮೀನು ನಿರಾಕರಿಸಿದರು. ವಿವರವಾದ ಆದೇಶ ಗುರುವಾರ         ಹೊರಬಿದ್ದಿದೆ.

                  ಈ ಮೂವರು ನಿಷೇಧಿತ ಸಂಘಟನೆ ಸಿಪಿಐನ (ಮಾವೋವಾದಿ) ಇತರ ಸದಸ್ಯರೊಡಗೂಡಿ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ಮೋದಿ ಸರ್ಕಾರ ಉರುಳಿಸಲು ಗಂಭೀರ ಸಂಚು ರೂಪಿಸಿರುವುದನ್ನು ಸ್ಥಳದಲ್ಲಿ ದೊರೆತ ದಾಖಲೆಯಲ್ಲಿರುವ ವಿಷಯವು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

             'ಸಿಪಿಐ (ಮಾವೋವಾದಿ) 'ಮೋದಿ ರಾಜ್' ಅನ್ನು ಕೊನೆಗೊಳಿಸಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋಗಳನ್ನು ಗುರಿಯಾಗಿಸಿಕೊಂಡು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಸಾವಿನಂತಹ ಇನ್ನೊಂದು ಘಟನೆಯ ಬಗ್ಗೆಯೂ ನಕ್ಸಲರು ಯೋಚಿಸುತ್ತಿದ್ದಾರೆ ಎಂಬುದು ಸ್ಥಳದಲ್ಲಿ ದೊರೆತ ಪ್ರಾಥಮಿಕ ದಾಖಲೆಯಾದ ಆ ಪತ್ರದಲ್ಲಿದೆ' ಎಂದು ಕೋರ್ಟ್ ಹೇಳಿದೆ.

'ಆರೋಪಿಗಳು ನಿಷೇಧಿತ ಸಂಘಟನೆ ಸಿಪಿಐ (ಮಾವೋವಾದಿ) ಸದಸ್ಯರಷ್ಟೇ ಅಲ್ಲ, ಅವರು ಸಂಘಟನೆಯ ಉದ್ದೇಶಕ್ಕಾಗಿ ಮತ್ತಷ್ಟು ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬುದು ಪ್ರಾಥಮಿಕ ದಾಖಲೆಯಲ್ಲಿದೆ. ಇದು ದೇಶದ ಪ್ರಜಾಪ್ರಭುತ್ವವನ್ನು ಉರುಳಿಸುವ ಪ್ರಯತ್ನವಲ್ಲದೇ ಮತ್ತೇನೂ ಅಲ್ಲ' ಎಂದು ನ್ಯಾಯಾಲಯ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries