ನವದೆಹಲಿ: ಕಾನೂನು ರಚನೆ ಸಂಸತ್ತು ಅಥವಾ ರಾಜ್ಯ ಶಾಸಕಾಂಗದಿಂದ ನಿರ್ವಹಿಸಬೇಕಾದ ಸಾರ್ವಭೌಮ ಕಾರ್ಯವಾಗಿದೆ ಮತ್ತು ನ್ಯಾಯಾಲಯವು ಕಾನೂನು ಜಾರಿಗೊಳಿಸಲು ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದ್ದು, 2014 ರಂದು ಹೊರಡಿಸಲಾದ ವಿಸಲ್ ಊದುವವರ ಸಂರಕ್ಷಣೆ ಕಾಯ್ದೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂಬ ಅರ್ಜಿಯನ್ನು ವಜಾಗೊಳಿಸಿದೆ.
ರಾಜ್ಯ ಶಾಸಕಾಂಗ ಪ್ರತಿನಿಧಿಗಳು' ಜನರ ಬಯಕೆಯಾಗಿದೆ. ಆದ್ದರಿಂದ ಸಂಸತ್ತು ಅಥವಾ ರಾಜ್ಯ ಶಾಸಕಾಂಗದಿಂದ ಕಾನೂನು ರಚನೆಯಾಗಿ ಅದನ್ನು ಅವುಗಳೇ ಜಾರಿಗೆ ತರಬೇಕಾಗಿದೆ ಎಂದು ಹೈಕೋರ್ಟ್ ಹೇಳಿತು.
ಕಾನೂನು ಜನರ ಬಯಕೆಯಲ್ಲದೇ ಬೇರೆನೂ ಅಲ್ಲ. ರಾಜ್ಯ ಶಾಸಕಾಂಗ ಜನರ ಬಯಕೆಯನ್ನು ಅನುಷ್ಠಾನಕ್ಕೆ ತರಬಹುದು, ಸಂಸತ್ತಿನ ಸೌರ್ವಭೌಮ ಕಾರ್ಯಕ್ಕೆ ನಾವು ನೋಟಿಸ್ ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ಮತ್ತು ನ್ಯಾಯಾಧೀಶ ಜ್ಯೋತಿ ಸಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ತಿಳಿಸಿತು.
ಪ್ರಸ್ತುತ ಗುರ್ ತೆಗ್ ಬಹದ್ದೂರ್ ಆಸ್ಪತ್ರೆಯಲ್ಲಿ ಹಿರಿಯ ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಮೊಹಮ್ಮದ್ ಅಜಾಜೌರ್ ರೆಹಮಾನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಸಂಸತ್ತು ಅನೇಕ ಕಾನೂನುಗಳನ್ನು ರಚಿಸಿದೆ ಆದರೆ, ಕೆಲವೊಂದನ್ನು ಇನ್ನೂ ಜಾರಿಗೊಳಿಸಿಲ್ಲ, ಅವುಗಳನ್ನು ಜಾರಿಗೊಳಿಸುವಂತೆ ನಿರ್ದೇಶಿಸುವ ಅಧಿಕಾರ ನ್ಯಾಯಾಲಯಗಳಿಲ್ಲ ಇಲ್ಲ, ಈ ಅರ್ಜಿಯಲ್ಲಿ ಯಾವುದೇ ಮಹತ್ವದ ಅಂಶಗಳಿಲ್ಲ ಎಂದು ಹೇಳಿ ವಜಾಗೊಳಿಸಿತು.