ಬೇಸಿಗೆಯಲ್ಲಿ ಬಾಯಾರಿಕೆ ಜಾಸ್ತಿ. ಹಾಗಾಗಿ ಕಂಡ ಕಂಡಲ್ಲಿ ನೀರು ಕುಡಿಯುವವರ ಸಂಖ್ಯೆ ಜಾಸ್ತಿ ಇರುತ್ತದೆ. ಜೊತೆಗೆ ಕಬ್ಬಿನ ಹಾಲು ಆರೋಗ್ಯಕ್ಕೂ ಒಳ್ಳೆಯದು ಎನ್ನುವ ಕಾರಣಕ್ಕೆ ಅನೇಕರು ಕಬ್ಬಿನ ಹಾಲಿನ ಮೊರೆ ಹೋಗ್ತಾರೆ. ಆದ್ರೆ ಕಬ್ಬಿನ ಹಾಲು ಕುಡಿಯುವ ಮುನ್ನ ಕೆಲವೊಂದು ವಿಷಯಗಳನ್ನು ನೆನಪಿಟ್ಟುಕೊಳ್ಳಿ.

ಅಲ್ಲಲ್ಲಿ ಈಗ ಕಬ್ಬಿನ ರಸ ತೆಗೆಯುವ ಯಂತ್ರದ ಜೊತೆಗೆ ಕಬ್ಬಿನ ರಸ ಸಿಗುತ್ತದೆ ಎಂಬ ಬೋರ್ಡ್ ನಿಮಗೆ ಕಾಣುತ್ತದೆ. ಬಾಯಾರಿಕೆ ನೀಗಿಸಿಕೊಳ್ಳಲು ಯಂತ್ರದ ಬಗ್ಗೆ, ಜ್ಯೂಸ್ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ಗಮನ ನೀಡದೆ ಜ್ಯೂಸ್ ಆರ್ಡರ್ ಮಾಡಿ ಕುಡಿದು ಬರ್ತೀರಿ. ಆದ್ರೆ ಇದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತೆ ಎಂಬುದು ನೆನಪಿರಲಿ.
ಕೆಲವರು ಯಂತ್ರವನ್ನು ಆಗಾಗ ಸ್ವಚ್ಛಗೊಳಿಸುವುದಿಲ್ಲ. ಕಬ್ಬಿನಲ್ಲಿ ಮಣ್ಣಿನಂಶವಿರುತ್ತದೆ. ನಿಂಬೆ ಹಣ್ಣು ಅಥವಾ ಪುದೀನಾ, ಶುಂಠಿಯನ್ನು ಸ್ವಚ್ಛಗೊಳಿಸದೆ ಕಬ್ಬಿನ ರಸಕ್ಕೆ ಬೆರೆಸಿ ನೀಡುತ್ತಾರೆ. ಜ್ಯೂಸ್ ಮಾಡುವ ವ್ಯಕ್ತಿ ಕೆಲವೊಮ್ಮೆ ಮಷಿನ್ ಮುಟ್ಟಿ ಕೈ ಕೆಮಿಕಲ್ ಮಾಡಿಕೊಳ್ಳುತ್ತಾನೆ. ಅದೇ ಕೈನಲ್ಲಿ ನಿಮಗೆ ಜ್ಯೂಸ್ ನೀಡ್ತಾನೆ. ಅದ್ರ ರಸ ನಿಮ್ಮ ಆರೋಗ್ಯ ಕೆಡಿಸುವುದರಲ್ಲಿ ಎರಡು ಮಾತಿಲ್ಲ.
ಎಲ್ಲ ಕಡೆ ಇಂತ ಸಮಸ್ಯೆ ಇದ್ದಿದ್ದೇ ಎಂದು ನಿರ್ಲಕ್ಷ್ಯ ಬೇಡ. ಕೊಳಕಾಗಿರುವ ಈ ಕಬ್ಬಿನ ರಸದಿಂದ ಹೆಪಟೈಟಿಸ್ ಎ, ಅತಿಸಾರ ಮತ್ತು ಹೊಟ್ಟೆಯ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಖಾಯಿಲೆ ಬಂದ ಮೇಲೆ ತೊಂದರೆ ಅನುಭವಿಸುವ ಬದಲು ಕಬ್ಬಿನ ಹಾಲು ಸೇವನೆ ಮಾಡುವಾಗಲೇ ಎಲ್ಲ ವಿಷಯದ ಬಗ್ಗೆ ಗಮನ ನೀಡಿ.