ತಿರುವನಂತಪುರ: ಕ್ರಿಶ್ಚಿಯನ್ ನಾಡಾರ್ ಸಮುದಾಯ ಇನ್ನು ಒಬಿಸಿ ವರ್ಗಕ್ಕೆ ಸೇರಲಿದೆ. ಎಸ್ ಐಯುಸಿ ಹೊರತುಪಡಿಸಿ ಕ್ರಿಶ್ಚಿಯನ್ ಪಂಗಡಕ್ಕೆ ಸೇರಿದ ನಾಡರ್ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಲು ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.
ಕಳೆದ ಫೆಬ್ರುವರಿಯಲ್ಲಿ ಕ್ರೈಸ್ತ ನಾಡಾರ್ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಒಬಿಸಿ ಪಟ್ಟಿಗೆ ಸಮುದಾಯಗಳನ್ನು ಸೇರಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ ಎಂದು ತೋರಿಸಿ ನಾಡಾರ್ ಸಮುದಾಯವು ಹೈಕೋರ್ಟ್‍ನ ಮೊರೆ ಹೋಗಿತ್ತು. ಇದರ ಬೆನ್ನಲ್ಲೇ ಸರ್ಕಾರ ಆದೇಶ ಹಿಂಪಡೆದಿತ್ತು.
ಸಮುದಾಯಗಳನ್ನು ಒಬಿಸಿ ಎಂದು ವರ್ಗೀಕರಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಲು ಸಂಸತ್ತು ಇತ್ತೀಚೆಗೆ ಕಾನೂನನ್ನು ತಿದ್ದುಪಡಿ ಮಾಡಿದೆ. ಇದರೊಂದಿಗೆ ಕ್ರಿಶ್ಚಿಯನ್ ನಾಡಾರ್ ಸಮುದಾಯವನ್ನು ಒಬಿಸಿಗೆ ಸೇರಿಸಲು ನಿರ್ಧರಿಸಲಾಯಿತು.