ಕುಂಬಳೆ: ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕೇರಳ ರಾಜ್ಯ ಅಧ್ಯಕ್ಷ ಟಿ.ನಸಿರುದ್ದೀನ್(78) ನಿಧನದ ಹಿನ್ನೆಲೆಯಲ್ಲಿ ಕೇರಳ ರಾಜ್ಯದಾದ್ಯಂತ ವ್ಯಾಪಾರ ಸಂಸ್ಥೆಗಳನ್ನು ಶುಕ್ರವಾರ ಮುಚ್ಚುಗಡೆಗೊಳಿಸಲಾಗಿದೆ.
ಹೃದಯಾಘಾತದ ಹಿನ್ನೆಲೆಯಲ್ಲಿ ಫೆ.10 ರಂದು ರಾತ್ರಿ 10.30 ಕ್ಕೆ ನಸೀರುದ್ದೀನ್ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಮೂರು ದಶಕಗಳಿಂದ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ರಾಜ್ಯಾಧ್ಯಕ್ಷರ ನಿಧನದ ಹಿನ್ನೆಲೆಯಲ್ಲಿ ಮಂಜೇಶ್ವರ, ಉಪ್ಪಳ, ಕುಂಬಳೆ, ನೀರ್ಚಾಲು, ಬದಿಯಡ್ಕ, ಪೆರ್ಲ, ಮುಳ್ಳೇರಿಯ ಸಹಿತ ವಿವಿಧ ಘಟಕಗಳು ಮೆರವಣಿಗೆ ನಡೆಸಿ ಸಂತಾಪ ಸೂಚಕ ಸಭೆ ನಡೆಸಿದರು.
(ಚಿತ್ರ ನೀರ್ಚಾಲು ಘಟಕದ ವತಿಯಿಂದ ನಡೆದ ಸಂತಾಪ ಸಭೆ.)