ತಿರುವನಂತಪುರ: ಕೇರಳದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯವಾಗದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಒತ್ತಾಯಿಸಿದ್ದಾರೆ. ಗೃಹ ಇಲಾಖೆಯ ಸಂಪೂರ್ಣ ವೈಫಲ್ಯಕ್ಕೆ ರಾಜಧಾನಿ ಪಟ್ಟಪ್ಪಕಲ್ಲಿನ ಹೋಟೆಲ್ ಒಂದರಲ್ಲಿ ನೌಕರನೊಬ್ಬ ಕನ್ನ ಹಾಕಿರುವುದು ಇತ್ತೀಚಿನ ಉದಾಹರಣೆ. ಸಿಪಿಎಂಗೆ ಆಪ್ತರಾಗಿರುವ ಗೂಂಡಾಗಳು ತಿರುವನಂತಪುರದಲ್ಲಿ ಛಿದ್ರಗೊಳಿಸುತ್ತಿದ್ದಾರೆ ಎಂದು ಸುರೇಂದ್ರನ್ ಹೇಳಿದ್ದಾರೆ.
ಕಣ್ಣೂರಿನಲ್ಲಿ ಪಕ್ಷದ ಗೂಂಡಾಗಳು ವಿವಾಹ ಮೆರವಣಿಗೆಯ ಮೇಲೆ ಬಾಂಬ್ ಹಾಕಿ ಯುವಕನನ್ನು ಕೊಂದಿದ್ದಾರೆ. ಕೇರಳದಲ್ಲಿ ಬೇಲಿಯೇ ಹೊಲ ಮೇಯುತ್ತಿದೆ. ಮಲಪ್ಪುರಂನ ಅಝಿಕೋಡ್‍ನಲ್ಲಿ ದಣಿದಿದ್ದ ತಾಯಿಯ ಎದುರೇ ಮಾನಸಿಕ ಮತ್ತು ದೈಹಿಕವಾಗಿ ಅಸ್ವಸ್ಥ ಬಾಲಕಿಯೊಬ್ಬಳನ್ನು ಪಾತಕಿಯೊಬ್ಬ ಆಕೆಯ ಮನೆಯ ಬಾಗಿಲು ಹಾಕಿಕೊಂಡು ಬರ್ಬರವಾಗಿ ಅತ್ಯಾಚಾರವೆಸಗಿದ್ದಾನೆ. ಆದರೂ ಸ್ತ್ರೀವಾದಿಗಳು ಮತ್ತು ಸಾಂಸ್ಕøತಿಕ ನಾಯಕರು ಪ್ರತಿಕ್ರಿಯಿಸುವುದಿಲ್ಲ. ನ್ಯಾಶನಲ್ ಕ್ರೈಮ್ ರೆಕಾಡ್ರ್ಸ್ ಬ್ಯೂರೋ ಪ್ರಕಾರ ಕೇರಳದಲ್ಲಿ ಅತಿ ಹೆಚ್ಚು ಅಪರಾಧ ಪ್ರಮಾಣವಿದೆ.
ರಾಜ್ಯದಲ್ಲಿ ಅಪರಾಧಗಳು ಹೆಚ್ಚಾಗಲು ಪೋಲೀಸರ ಪಕ್ಷಪಾತ ಮತ್ತು ನಿಷ್ಕ್ರಿಯತೆಯೇ ಪ್ರಮುಖ ಕಾರಣ. ಪೋಲೀಸರಲ್ಲೂ ಸುಮಾರು 1,000 ಕ್ರಿಮಿನಲ್‍ಗಳಿದ್ದಾರೆ ಎಂದು ಗೃಹ ಸಚಿವರು ವಿಧಾನಸಭೆಗೆ ತಿಳಿಸಿದ್ದರು. ಗೂಂಡಾಗಳು ಮತ್ತು ಪಕ್ಷದ ಕೊಟೇಶನ್ ಗುಂಪುಗಳ ವಿಘಟನೆಯು ಜನ ಸಾಮಾನ್ಯರ ಜೀವನಕ್ಕೆ ಸವಾಲಾಗಿದೆ ಎಂದು ಸುರೇಂದ್ರನ್ ಹೇಳಿದರು.