ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಯುಜಿಸಿ ನೆಟ್ ಫಲಿತಾಂಶಗಳನ್ನು ಪ್ರಕಟಿಸಿದೆ. ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ ಪರೀಕ್ಷೆಯ ಫಲಿತಾಂಶವನ್ನು ತಿಳಿಯಬಹುದು. ಈ ವರ್ಷ ಮೂರು ಹಂತಗಳಲ್ಲಿ ಪರೀಕ್ಷೆ ನಡೆದಿತ್ತು.
ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಡಿಸೆಂಬರ್ 2020 ಮತ್ತು ಜೂನ್ 2021 ರಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ನವೆಂಬರ್ 2021 ಮತ್ತು ಜನವರಿ 2022 ರ ನಡುವೆ ಮೂರು ಹಂತಗಳಲ್ಲಿ ನಡೆಸಲಾಯಿತು. ಸುಮಾರು 12 ಲಕ್ಷ ಮಂದಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
ಭಾರತದ 239 ನಗರಗಳಲ್ಲಿ 837 ಕೇಂದ್ರಗಳಲ್ಲಿ 81 ವಿಷಯಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು
ಫಲಿತಾಂಶವನ್ನು ಈ ರೀತಿ ಪರಿಶೀಲಿಸಬಹುದು.
ಅಧಿಕೃತ ವೆಬ್‌ಸೈಟ್‌ಗೆ ಹೋಗಿ
UGC ನೆಟ್ ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ
ಲಾಗಿನ್ ಮಾಹಿತಿಯನ್ನು ಸಲ್ಲಿಸಿ
ಫಲಿತಾಂಶವನ್ನು ಪರಿಶೀಲಿಸಿದ ನಂತರ, ಫಲಿತಾಂಶವನ್ನು ಡೌನ್‌ಲೋಡ್ ಮಾಡಬಹುದು
ಲಭ್ಯವಿರುವ ಫಲಿತಾಂಶದ ಮಾಹಿತಿಯ ಹಾರ್ಡ್ ಪ್ರತಿಯನ್ನು ಇರಿಸಿ