ಕಾಸರಗೋಡು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕರ್ನಾಟಕ ರಾಜ್ಯ ಮತ್ತು ಕಾಸರಗೋಡು ಜಿಲ್ಲಾ ಘಟಕ ಪದಾಧಿಕಾರಿಗಳ ಆಯ್ಕೆಗೆ ಮತದಾನ ಫೆ.27 ರಂದು ನಡೆಯುವ ಹಿನ್ನೆಲೆಯಲ್ಲಿ ಕಾಸರಗೋಡು ಘಟಕದ ತುರ್ತು ಸಭೆ ನಡೆಯಿತು.
ತುರ್ತು ಸಭೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಪತ್ರಕರ್ತರ ಸಂಘಕ್ಕೆ ತನ್ನದೇ ಆದ ಶಾಶ್ವತ ಕಾರ್ಯಾಲಯ ಇಲ್ಲದ ಕಾರಣದಿಂದ ಕಾಸರಗೋಡು ನುಳ್ಳಿಪ್ಪಾಡಿ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಕಾರ್ಯಾಲಯದಲ್ಲಿ ಚುನವಾಣಾ ಪ್ರಕ್ರಿಯೆ ಹಾಗು ಕಾರ್ಯಾಲಯವನ್ನಾಗಿ ಮಾಡುವರೇ ತೀರ್ಮಾನಿಸಲಾಯಿತು.
ತುರ್ತು ಸಭೆಯಲ್ಲಿ ಎ.ಆರ್.ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಪತ್ರಕರ್ತರಾದ ಗಂಗಾಧರ, ಪುರುಷೋತ್ತಮ ಪೆರ್ಲ, ವೇಣುಗೋಪಾಲ್, ಅಖಿಲೇಶ್ ನಗುಮುಗಂ, ಜಗನ್ನಾಥ, ವಿವೇಕ್ ಆದಿತ್ಯ, ವಿದ್ಯಾಗಣೇಶ್, ರಾಜಶೇಖರ್, ಪ್ರದೀಪ್ ಬೇಕಲ್ ಮೊದಲಾದವರು ಮತದಾನ ಕುರಿತಾಗಿ ವಿಚಾರ ವಿನಿಮಯ ಮಾಡಿದರು. ಚುನಾವಣಾಧಿಕಾರಿ ವಾಮನ್ ರಾವ್ ಬೇಕಲ್ ಮಾರ್ಗದರ್ಶನ ನೀಡಿದರು.