HEALTH TIPS

ಸದ್ಯವೇ ವಿದ್ಯುತ್ ದರ ಏರಿಕೆ ಸಂಭವ; ಟ್ಯಾರಿಫ್ ಹೆಚ್ಚಳ ಬಯಸಿದ ಇಂಧನ ಸಚಿವಾಲಯ

            ನವದೆಹಲಿ: ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳನ್ನು ಸರಿದೂಗಿಸಿಕೊಳ್ಳಲು ವಿದ್ಯುತ್ ದರವನ್ನು ಕಾಲ ಕಾಲಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪರಿಷ್ಕರಿಸಬೇಕು ಎಂದು ಕೇಂದ್ರ ಇಂಧನ ಸಚಿವಾಲಯ ರಾಜ್ಯಗಳ ವಿದ್ಯುತ್ ವಿತರಣಾ ಕಂಪನಿಗಳಿಗೆ (ಡಿಸ್ಕಾಂ) ಸೂಚನೆ ನೀಡಿದೆ.

          ರಾಜ್ಯಗಳು ಅದನ್ನು ಅಕ್ಷರಶಃ ಪಾಲಿಸಿದರೆ ವಿದ್ಯುತ್ ಬಿಲ್​ನಲ್ಲಿ ಏರಿಕೆಯಾಗುವುದು ಖಚಿತ. ಅದರಿಂದಾಗಿ ಈಗಾಗಲೇ ಬೆಲೆಯೇರಿಕೆಯಿಂದ ತತ್ತರಿಸಿರುವ ಜನರ ಮೇಲೆ ಇನ್ನಷ್ಟು ಹೊರೆ ಬೀಳಲಿದೆ. ಸಂಸದೀಯ ಸಮಾಲೋಚನಾ ಸಮಿತಿಗೆ ಇಂಧನ ಸಚಿವಾಲಯ ಸಲ್ಲಿಸಿರುವ ಟಿಪ್ಪಣಿಯಲ್ಲಿ ಡಿಸ್ಕಾಂಗಳು ಸಕಾಲದಲ್ಲಿ ಟ್ಯಾರಿಫ್​ಗಳನ್ನು ಪರಿಷ್ಕರಿಸದಿರುವುದರಿಂದ ನಷ್ಟ ಹಾಗೂ ಸಾಲಗಳ ವಿಷ ಚಕ್ರ ತಾಳಿಕೊಳ್ಳಲಾಗದ ಮಟ್ಟಕ್ಕೆ ತಲುಪುತ್ತಿದೆ ಎಂದು ತಿಳಿಸಿದೆ.

             ಪರಿಷ್ಕರಣೆ ಅರ್ಜಿಗಳನ್ನು ವಿಳಂಬವಾಗಿ ಸಲ್ಲಿಸಲಾಗುತ್ತಿದೆ. ಬಹುತೇಕ ಸಂದರ್ಭಗಳಲ್ಲಿ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳು (ಎಸ್​ಇಆರ್​ಸಿ) ಅವುಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡುತ್ತಿಲ್ಲ ಎಂದು ಸಚಿವಾಲಯ ಅತೃಪ್ತಿ ವ್ಯಕ್ತಪಡಿಸಿದೆ. ಅನೇಕ ಎಸ್​ಇಆರ್​ಸಿಗಳು ವೆಚ್ಚ ಸರಿದೂಗಿಸುವ ರೀತಿಯಲ್ಲಿ ಟ್ಯಾರಿಫ್ ನಿಗದಿಪಡಿಸುತ್ತಿಲ್ಲ. ಈ ಅಂತರವನ್ನು 'ರೆವಿನ್ಯೂ ಗ್ಯಾಪ್' ಅಥವಾ 'ಅಸೆಟ್ಸ್ ಗ್ಯಾಪ್' ಎಂದು ತೋರಿಸಲಾಗುತ್ತಿದೆ. ಈ ಅಂತರವನ್ನು ರಿಕವರ್ ಮಾಡಲು ಡಿಸ್ಕಾಂಗಳಿಗೆ ಸಾಧ್ಯವಿಲ್ಲ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

               ಟ್ಯಾರಿಫ್ ಸಲ್ಲಿಸದ 7 ರಾಜ್ಯಗಳು: 36ರ ಪೈಕಿ 17 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು 2021-22ನೇ ಸಾಲಿಗೆ 2021ರ ಮಾರ್ಚ್​ಗೂ ಮುನ್ನ ಹಾಗೂ 12 ರಾಜ್ಯ-ಯುಟಿಗಳು ಏಪ್ರಿಲ್-ನವೆಂಬರ್ ನಡುವೆ ಟ್ಯಾರಿಫ್ ಆರ್ಡರ್ ಸಲ್ಲಿಸಿವೆ. ಉಳಿದ ಏಳು ಸಲ್ಲಿಸಿಯೇ ಇಲ್ಲ ಎಂದು ಇಂಧನ ಸಚಿವಾಲಯ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries