ಮುಂಬೈ: ಕ್ರಿಪ್ಟೊ ಕರೆನ್ಸಿಗಳ ಬಗ್ಗೆ ಜಾಹೀರಾತು ನೀಡುವಾಗ ಅವುಗಳು 'ನಿಯಮಗಳಿಗೆ ಒಳಪಟ್ಟಿಲ್ಲ ಮತ್ತು ಹೆಚ್ಚಿನ ಆಪತ್ತು ತರಬಹುದು' ಎನ್ನುವ ಘೋಷಣೆಯನ್ನು ಏಪ್ರಿಲ್ 1ರಿಂದ ಪ್ರಕಟಿಸಬೇಕು ಎಂದು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿಯು (ಎಎಸ್‌ಸಿಐ) ಹೇಳಿದೆ.
ಮುಂಬೈ: ಕ್ರಿಪ್ಟೊ ಕರೆನ್ಸಿಗಳ ಬಗ್ಗೆ ಜಾಹೀರಾತು ನೀಡುವಾಗ ಅವುಗಳು 'ನಿಯಮಗಳಿಗೆ ಒಳಪಟ್ಟಿಲ್ಲ ಮತ್ತು ಹೆಚ್ಚಿನ ಆಪತ್ತು ತರಬಹುದು' ಎನ್ನುವ ಘೋಷಣೆಯನ್ನು ಏಪ್ರಿಲ್ 1ರಿಂದ ಪ್ರಕಟಿಸಬೇಕು ಎಂದು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿಯು (ಎಎಸ್‌ಸಿಐ) ಹೇಳಿದೆ.
ಕ್ರಿಪ್ಟೊ ಕರೆನ್ಸಿ ವಹಿವಾಟಿನಿಂದ ಆಗುವ ಯಾವುದೇ ನಷ್ಟಕ್ಕೆ ಕಾನೂನಿನ ನೆರವು ಸಿಗಲಿಕ್ಕಿಲ್ಲ ಎನ್ನುವುದನ್ನು ಕೂಡ ಜಾಹೀರಾತಿನಲ್ಲಿ ತಿಳಿಸಬೇಕು ಎಂದು ಜಾಹೀರಾತುದಾರರಿಗೆ ಅದು ತಿಳಿಸಿದೆ. ಕ್ರಿಪ್ಟೊ ಉತ್ಪನ್ನಗಳು ಮತ್ತು ಸೇವೆಗಳ ಪ್ರಚಾರದ ಸಂದರ್ಭದಲ್ಲಿ ಗಮನ ಸಳೆಯುವಂತೆ ಮತ್ತು ಸ್ಪಷ್ಟವಾಗಿ ಈ ಮಾಹಿತಿಯನ್ನು ಪ್ರಕಟಿಸಬೇಕು ಎಂದು ಹೇಳಿದೆ.
ಉದ್ಯಮದ ಪಾಲುದಾರರು, ಸರ್ಕಾರ ಮತ್ತು ಹಣಕಾಸು ನಿಯಂತ್ರಣ ವ್ಯವಸ್ಥೆಗಳ ಸಲಹೆಯ ಮೇರೆಗೆ ಮಾರ್ಗಸೂಚಿಗಳನ್ನು ಘೋಷಿಸಲಾಗಿದೆ ಎಂದು ಹೇಳಿದೆ.
ವರ್ಚುವಲ್ ಡಿಜಿಟಲ್ ಅಸೆಟ್ ಮತ್ತು ಸೇವೆಗಳು ಹೂಡಿಕೆಯ ಹೊಸ ಮಾರ್ಗವಾಗಿ ಈಗಷ್ಟೇ ಬೆಳೆಯುತ್ತಿವೆ. ಹೀಗಾಗಿ, ಇವುಗಳ ಕುರಿತ ಜಾಹೀರಾತಿಗೆ ನಿರ್ದಿಷ್ಟ ಮಾರ್ಗಸೂಚಿಯ ಅಗತ್ಯ ಇದೆ. ಅದರಲ್ಲಿ ಇರುವ ಅಪಾಯವನ್ನು ತಿಳಿಸಲು ಮತ್ತು ಎಚ್ಚರಿಕೆಯಿಂದ ಹೆಜ್ಜೆ ಇಡುವ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದು ಎಎಸ್‌ಸಿಐ ಅಧ್ಯಕ್ಷ ಸುಭಾಷ್ ಕಾಮತ್ ಹೇಳಿದ್ದಾರೆ.
ವಿಡಿಯೊ ಜಾಹೀರಾತುಗಳಲ್ಲಿ ಕನಿಷ್ಠ 5 ಸೆಕೆಂಡ್‌ಗಳವರೆಗೆ ಕ್ರಿಪ್ಟೊ ಕುರಿತಾದ ಮಾಹಿತಿಯು ತೆರೆಯ ಮೇಲೆ ಇರಬೇಕು. ಎರಡು ನಿಮಿಷಕ್ಕಿಂತ ಹೆಚ್ಚಿನ ಅವಧಿಯ ಜಾಹೀರಾತಿನಲ್ಲಿ ಜಾಹೀರಾತಿನ ಆರಂಭ ಮತ್ತು ಅಂತ್ಯದಲ್ಲಿ ಮಾಹಿತಿ ಬರಬೇಕು. ಆಡಿಯೊ ಜಾಹೀರಾತು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಾಗಲೂ ಈ ಮಾರ್ಗಸೂಚಿಗಳನ್ನು ಅನುಸರಿಸಬೇಕು.
ಜಾಹೀರಾತು ನೀಡುವಾಗ 'ಕರೆನ್ಸಿ', 'ಸೆಕ್ಯುರಿಟೀಸ್' ಮತ್ತು 'ಡೆಪಾಸಿಟರೀಸ್'