HEALTH TIPS

ಬುಲೆಟ್‌ ಟ್ರೇನ್‌ ಕಾಮಗಾರಿ ಭರದಿಂದ ಸಾಗಿದೆ: ಸಚಿವ ವೈಷ್ಣವ್

        ನವದೆಹಲಿ: ಮುಂಬೈ- ಅಹಮದಾಬಾದ್‌ ಬುಲೆಟ್‌ ಟ್ರೇನ್‌ ಯೋಜನೆಗೆ ಸಂಬಂಧಿಸಿದ ಕಾಮಗಾರಿ ಭರದಿಂದ ನಡೆಯುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಹೇಳಿದ್ದಾರೆ.

         ಮಾಧ್ಯಮ ಪ್ರತಿನಿಧಿಗಳೊಂದಿಗೆ ನಡೆದ ಸಂವಾದದಲ್ಲಿ ಈ ವಿಷಯ ತಿಳಿಸಿದ ಅವರು, '13 ಕಿ.ಮೀ.

ಉದ್ದದ ಮಾರ್ಗದಲ್ಲಿ ಸ್ತಂಭಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ತಿಂಗಳಿಗೆ 5 ಕಿ.ಮೀ. ಉದ್ದದ ಮಾರ್ಗ ನಿರ್ಮಾಣ ಮಾಡಲಾಗುತ್ತಿದ್ದು, ಇದನ್ನು 10 ಕಿ.ಮೀ.ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ' ಎಂದರು.

           ಒಟ್ಟು 508 ಕಿ.ಮೀ. ಉದ್ದದ ಮುಂಬೈ-ಅಹಮದಾಬಾದ್‌ ಬುಲೆಟ್‌ ಟ್ರೇನ್‌ ಯೋಜನೆಯನ್ನು 'ನ್ಯಾಷನಲ್ ಹೈಸ್ಪೀಡ್ ರೇಲ್ ಕಾರ್ಪೋರೇಷನ್ ಲಿಮಿಟೆಡ್' (ಎನ್‌ಎಚ್‌ಎಸ್‌ಆರ್‌ಸಿಎಲ್‌) ಅನುಷ್ಠಾನಗೊಳಿಸುತ್ತಿದೆ.

          ಈ ಪೈಕಿ 348 ಕಿ.ಮೀ. ಮಾರ್ಗ ಗುಜರಾತ್‌, 4 ಕಿ.ಮೀ. ದಾದ್ರ ಮತ್ತು ನಗರ ಹವೇಲಿ ಹಾಗೂ ಉಳಿದ 156 ಕಿ.ಮೀ. ಮಾರ್ಗ ಮಹಾರಾಷ್ಟ್ರ ಮೂಲಕ ಹಾಯ್ದು ಹೋಗುತ್ತದೆ.

           ಗುಜರಾತ್‌ನಲ್ಲಿ ಶೇ 90ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಮಹಾರಾಷ್ಟ್ರದಲ್ಲಿ ಭೂಸ್ವಾಧೀನ ವಿಳಂಬವಾದ ಕಾರಣ, ಯೋಜನೆ ಅನುಷ್ಠಾನಕ್ಕೆ ಹಿನ್ನಡೆಯುಂಟಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries