ಪೆರ್ಲ: ಪೆರ್ಲ ಸೇವಾ ಸಹಕಾರಿ ಬ್ಯಾಂಕ್, ಪೆರ್ಲ ನಾಲಂದ ಮಹಾ ವಿದ್ಯಾಲಯ ಹಾಗೂ ಕ್ಯಾಂಪ್ಕೋ ಇನ್ ಸೇವಾ ಸಹಕಾರದೊಂದಿಗೆ ನೆಲದಿಂದ ಅಡಕೆ ಕೊಯ್ಲು ಮತ್ತು ಔಷಧ ಸಿಂಪಡನೆ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಮಾ 10ರಂದು ಬೆಳಗ್ಗೆ 10ಕ್ಕೆ ಬೈಕುಂಜೆ ನಿವಾಸಿ ಪ್ರಗತಿಪರ ಕೃಷಿಕ ಬಿ.ಜಿ ಜಗದೀಶ್ ಅವರ ಕೃಷಿ ಕ್ಷೇತ್ರದಲ್ಲಿ ಜರುಗಲಿದೆ.
ಕುಮಟಾ ಕಲ್ಲಬ್ಬೆಯ ನುರಿತ ತರಬೇತುದಾರರು ತರಬೇತಿ ನೀಡಲಿದ್ದಾರೆ. ದೋಟಿ ಮೂಲಕ ಅಡಕೆ ಕೊಯ್ಲು ಮತ್ತು ಔಷಧ ಸಿಂಪಡಣೆಯನ್ನು ವೃತ್ತಿಯಾಗಿ ಸ್ವೀಕರಿಸಿ ಬದುಕು ರೂಪಿಸಿಕೊಳ್ಳಲು ಸಹಾಯವಾಗುವ ರೀತಿಯಲ್ಲಿ ಶಿಬಿರ ಆಯೋಜಿಸಲಾಗುವುದು. 20ರಿಂದ 40ವರ್ಷದೊಳಗಿನ ಯುವಕರಿಗೆ ತರಬೇತಿಯಲ್ಲಿ ಆದ್ಯತೆ ಕಲ್ಪಿಸಲಾಗಿದೆ.ತರಬೇತಿಯಲ್ಲಿ ಪಾಲ್ಗೊಳ್ಳಲಿಚ್ಛಿಸುವವರು ಫೆ. 28ರ ಒಳಗೆ ಪೆರ್ಲ ಸೇವಾ ಸಹಕಾರಿ ಬ್ಯಾಂಕ್‍ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಪೆರ್ಲ ಸೇವಾ ಸಹಕಾರಿ ಬ್ಯಾಂಕಿನ ನಾಗರಾಜ್(9495370751)ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.