HEALTH TIPS

ಭಾರತ ಗುರಿಯಾಗಿಸಿ ವಿಶೇಷ ಘಟಕ ರಚಿಸಿದ ದಾವೂದ್, ಹಿಟ್ ಲಿಸ್ಟಲಿದ್ದಾರೆ ರಾಜಕೀಯ ನಾಯಕರು, ಉದ್ಯಮಿಗಳು

         ನವದೆಹಲಿ: ಗ್ಯಾಂಗ್ ಸ್ಟರ್ ದಾವೂದ್ ಇಬ್ರಾಹಿಂ ಭಾರತವನ್ನು ಗುರಿಯಾಗಿಸಿ ವಿಶೇಷ ಘಟಕವನ್ನು ರಚಿಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಹಿರಂಗಪಡಿಸಿದೆ. 

         ತನಿಖಾ ಸಂಸ್ಥೆ ಪ್ರಕಾರ, ಭಾರತದ ಹಲವು ರಾಜಕೀಯ ನಾಯಕರು ಮತ್ತು ಖ್ಯಾತ ಉದ್ಯಮಿಗಳ ಹೆಸರುಗಳು ದಾವೂದ್ ಇಬ್ರಾಹಿಂ ಹಿಟ್ ಲಿಸ್ಟ್‌ನಲ್ಲಿವೆ.

           ದಾವೂದ್ ಇಬ್ರಾಹಿಂ ವಿಶೇಷ ಘಟಕ ರಚಿಸಿ ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರ ಪ್ರಚೋದಿಸುವ ಉದ್ದೇಶದಿಂದ ಸ್ಫೋಟಕಗಳು ಮತ್ತು ಮಾರಕಾಸ್ತ್ರಗಳನ್ನು ಬಳಸಿ ದೇಶದ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದಾನೆ ಎಂದು ಎಫ್‌ಐಆರ್ ಬಹಿರಂಗಪಡಿಸಿದೆ. ಇದಲ್ಲದೆ, ದಾವೂದ್ ಇಬ್ರಾಹಿಂ ದೆಹಲಿ ಮತ್ತು ಮುಂಬೈ ಮೇಲೆ ತನ್ನ ಗಮನವನ್ನು ಕೇಂದ್ರಿಕರಿಸಿದ್ದಾನೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

           ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿರುವ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ವಿರುದ್ಧ ಇಡಿ ಇತ್ತೀಚೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್, ಆತನ ಸಹಾಯಕರು ಮತ್ತು ಗ್ಯಾಂಗ್ ಸದಸ್ಯರನ್ನು ಇಡಿ ವಿಚಾರಣೆ ನಡೆಸಲಿದೆ.

             ಶುಕ್ರವಾರ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಕ್ಬಾಲ್ ಕಸ್ಕರ್ ಅವರನ್ನು ಫೆಬ್ರವರಿ 24 ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries