ತಿರುವನಂತಪುರ: ರಾಜ್ಯದ ಕೆಎಸ್‍ಆರ್‍ಟಿಸಿ ಬಸ್‍ಗಳಿಗೆ ಜಿಲ್ಲಾವಾರು ಕ್ರಮ ಸಂಖ್ಯೆ ನೀಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಪ್ರಸ್ತುತ ಇರುವ ಬಾನೆಟ್ ಸಂಖ್ಯೆಯನ್ನು ಉಳಿಸಿಕೊಳ್ಳಲಾಗುವುದು. ಇದೇ ವೇಳೆ, ಪ್ರತಿ ಜಿಲ್ಲೆಗೆ ಬಸ್‍ನ ಎಡಭಾಗದಲ್ಲಿ ಎರಡು ಇಂಗ್ಲಿಷ್ ಅಕ್ಷರಗಳೊಂದಿಗೆ ಹೊಸ ಸಂಖ್ಯೆಯನ್ನು ನಿಗದಿಪಡಿಸಲಾಗುತ್ತದೆ.
ಪ್ರತಿ ಜಿಲ್ಲೆಯ ಕೋಡ್
ತಿರುವನಂತಪುರಂ-ಟಿವಿ
ಕೊಲ್ಲಂ-ಕೆಎಲ್
ಪತ್ತನಂತಿಟ್ಟ-ಪಿಟಿ
ಆಲಪ್ಪುಳ-ಎಎಲ್
ಕೊಟ್ಟಾಯಂ-ಕೆಟಿ
ಇಡುಕ್ಕಿ-ಐಡಿ
ಎರ್ನಾಕುಲಂ-ಇಕೆ
ತ್ರಿಶೂರ್-ಟಿಆರ್
ಪಾಲಕ್ಕಾಡ್-ಪಿಎಲ್
ಮಲಪ್ಪುರಂ-ಎಂಎಲ್
ಕೋಝಿಕ್ಕೋಡ್-ಕೆಕೆ
ವಯನಾಡ್-ಡಬ್ಲ್ಯೂಎನ್
ಕಣ್ಣೂರು-ಕೆಎನ್
ಕಾಸರಗೋಡು-ಕೆ.ಜಿ
ಪ್ರಸ್ತುತ ನೋಂದಣಿಯಾಗಿರುವ ಡಿಪೆÇೀ ಕೋಡ್ ಗಳು ಮುಂದೆ ಬಸ್‍ಗಳಲ್ಲಿ ದಾಖಲಾಗುವುದಿಲ್ಲ. ಜಂಟಮ್ ಬಸ್‍ಗಳಲ್ಲಿ, ಎಓ ಸರಣಿಯಲ್ಲಿನ ಬಾನೆಟ್ ಸಂಖ್ಯೆಗಳು ಬಲಭಾಗದಲ್ಲಿವೆ ಮತ್ತು ಸಿಟಿ ಸಕ್ರ್ಯುಲರ್ (ಸಿಸಿ) ಮತ್ತು ಸಿಟಿ ಶಟಲ್ (ಸಿಎಸ್) ಅಕ್ಷರಗಳು ಎಡಭಾಗದಲ್ಲಿರಲಿವೆ.