HEALTH TIPS

ಕೋವಿಡ್ ನಿಂದಾಗಿ ಸೃಷ್ಟಿಯಾಗಿರುವ ವೈದ್ಯಕೀಯ ತ್ಯಾಜ್ಯ ಆರೋಗ್ಯಕ್ಕೆ ಬೆದರಿಕೆ: ವಿಶ್ವ ಆರೋಗ್ಯ ಸಂಸ್ಥೆ

           ವಿಶ್ವಸಂಸ್ಥೆ: ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಪ್ರಯತ್ನದ ಭಾಗವಾಗಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯ ಮಾನವನ ಹಾಗೂ ಪರಿಸರದ ಆರೋಗ್ಯಕ್ಕೆ ಬೆದರಿಕೆ ಒಡ್ಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಸಿದೆ.

           ತ್ಯಜಿಸುವ ಸಿರಿಂಜ್ಗಳು, ಬಳಕೆಯಾದ ಪರೀಕ್ಷೆ ಕಿಟ್ ಹಾಗೂ ಹಳೆಯ ಲಸಿಕೆ ಬಾಟಲ್ಗಳ ರಾಶಿ ಸಾವಿರಾರು ಟನ್ ವೈದ್ಯಕೀಯ ತ್ಯಾಜ್ಯವಾಗಿ ಪರಿವರ್ತನೆಯಾಗುತ್ತಿದೆ. ಇದು ಆರೋಗ್ಯ ಕ್ಷೇತ್ರದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗೆ ಅತಿ ದೊಡ್ಡ ಸಂಕಷ್ಟವನ್ನು ತಂದೊಡ್ಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ತನ್ನ ನೂತನ ವರದಿಯಲ್ಲಿ ಹೇಳಿದೆ. 2020 ಮಾರ್ಚ್ ಹಾಗೂ 2021 ನವೆಂಬರ್ ನಡುವೆ ವಿಶ್ವಸಂಸ್ಥೆಯ ಪೋರ್ಟಲ್ ಮೂಲಕ ಆದೇಶಿಸಲಾದ 87,000 ಟನ್ಗಳಷ್ಟು ಪಿಪಿಇ ಕಿಟ್ಗಳು ದೊಡ್ಡ ಪಾಲು ತ್ಯಾಜ್ಯವಾಗಿ ಪರಿವರ್ತನೆಯಾಗಿದೆ ಎಂದು 71 ಪುಟಗಳ ದಾಖಲೆ ಹೇಳಿದೆ. ಇದಲ್ಲದೆ, 140 ದಶಲಕ್ಷಕ್ಕೂ ಅಧಿಕ ಪರೀಕ್ಷಾ ಕಿಟ್ಗಳನ್ನು ಹಡಗಿನ ಮೂಲಕ ರವಾನಿಸಲಾಗಿದೆ.

              ಇದರಿಂದ ಮುಖ್ಯವಾಗಿ 2,600 ಟನ್ ಪ್ಲಾಸ್ಟಿಕ್ ಹಾಗೂ ಸಾಕಷ್ಟು ರಾಸಾಯನಿಕ ತ್ಯಾಜ್ಯ ಉತ್ಪತ್ತಿಯಾಗಿದೆ. ಜಾಗತಿಕವಾಗಿ ಲಸಿಕೆಯ 8 ಶತಕೋಟಿ ಡೋಸ್ಗಳನ್ನು ನೀಡಲಾಗಿದೆ. ಇದು ಹೆಚ್ಚುವರಿ 144,000 ಟನ್ ಗಳಷ್ಟು ಗ್ಲಾಸ್ ಸೀಸೆ, ಸಿರೆಂಜ್, ಸೂಜಿ ಹಾಗೂ ಸುರಕ್ಷಾ ಬಾಕ್ಸ್ ಗಳ ರೂಪದ ತ್ಯಾಜ್ಯಗಳನ್ನು ಉತ್ಪಾದಿಸಿದೆ. ಸಾಮಾನ್ಯವಾಗಿ ಲಸಿಕೆ ನೀಡುವಾಗ ಕೈಗಳಿಗೆ ಗ್ಲೌಸ್ ಹಾಕಲಾಗುತ್ತದೆ.

          ಆದರೆ, ಲಸಿಕೆ ನೀಡುವಾಗ ಗ್ಲೌಸ್ ಬಳಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿಲ್ಲ ಎಂದು ವರದಿ ಹೇಳಿದೆ. ಉದಾಹರಣೆಗೆ ಬ್ರಿಟನ್ನಲ್ಲಿ ಪ್ರತಿ ಆರೋಗ್ಯ ಕಾರ್ಯಕರ್ತರು ಪ್ರತಿ ವಾರ 50 ಜೋಡಿ ಗ್ಲೌಸ್ಗಳನ್ನು ತ್ಯಾಜ್ಯವಾಗಿ ಎಸೆಯತ್ತಿದ್ದಾರೆ ಎಂದು ವರದಿ ಅಂದಾಜಿಸಿದೆ. ''ಆರೋಗ್ಯ ಕಾರ್ಯಕರ್ತರಿಗೆ ಪಿಪಿಇ ಕಿಟ್ಗಳನ್ನು ಒದಗಿಸುವುದು ತುಂಬಾ ಮುಖ್ಯವಾದುದು. ಅದೇ ರೀತಿ ಸುತ್ತಮುತ್ತಲಿನ ಪರಿಸರಕ್ಕೆ ಹಾನಿಯಾಗದಂತೆ ಅದನ್ನು ಬಳಸುವುದು ಕೂಡ ಅಷ್ಟೇ ಮುಖ್ಯವಾದುದು'' ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ನಿರ್ದೇಶಕ ಮೈಕಲ್ ರ್ಯಾನ್ ತಿಳಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries