ರಾಂಚಿ: ಚತ್ತೀಸ್ ಗಢ ಮೂಲದ ಮಹಿಳೆಯೋರ್ವರು ಷರಿಯಾ ಕೋರ್ಟ್ ನ ಸಿಂಧುತ್ವ ಕುರಿತಾಗಿ ಹೈಕೋರ್ಟಿನಲ್ಲಿ ಪೆಟಿಷನ್ ಸಲ್ಲಿಸಿದ್ದಾರೆ.
ರಾಯ್ ಪುರದ ನಿವಾಸಿಯಾದ ಅರ್ಜಿದಾರ ಮಹಿಳೆಗೆ ಆಕೆಯ ಪತಿ ಷರಿಯಾ ಕೋರ್ಟ್ ಮೂಲಕ ತಲಾಖ್ ನೀಡಿದ್ದರು. ಅದನ್ನು ಮಹಿಳೆ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಹಿಳೆ ತನ್ನ ಪತಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ತ್ರಿವಳಿ ತಲಾಖ್ ನೀಡುವುದನ್ನು ಸುಪ್ರೀಂ ಕೋರ್ಟ್ ಈಗಾಗಲೇ ನಿಷೇಧಿಸಿದೆ.